Home ಜಿಲ್ಲೆ ತುಮಕೂರು ಕಾಂಗ್ರೆಸ್ ನಾಯಕರಿಂದ ಎಸ್‌ಐಆರ್ ಕುರಿತು ಜನಜಾಗೃತಿ

ಕಾಂಗ್ರೆಸ್ ನಾಯಕರಿಂದ ಎಸ್‌ಐಆರ್ ಕುರಿತು ಜನಜಾಗೃತಿ

ತುಮಕೂರು, ಜು.೪- ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ೨೦೨೩ರ ಚುನಾವಣೆಯ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಹೆಚ್.ಜಿ.ಷಣ್ಮುಖಪ್ಪ, ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿ, ಎಸ್‌ಐಆರ್.(ವಿಶೇಷ ಮತದಾರರ ಪಟ್ಟಿ ಪರೀಷ್ಕರಣೆ) ಕುರಿತಂತೆ ಮತದಾರರಿಗೆ ಜಾಗೃತಿ ಮೂಡಿಸಿದ್ದಾರೆ.


ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್.ಐ.ಆರ್. ಪ್ರಕ್ರಿಯೆಯ ಭಾಗವಾಗಿಬಿ.ಎಲ್.ಓ ಗಳು ಜೂನ್ ೩೦ ರಿಂದ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಗೆ ಹೆಸರು ನೊಂದಾಯಿಸುವ ಎನಂಬರೇಷನ್ ಫಾರಂ ನೀಡಿದ್ದು, ಇದನ್ನು ತುಂಬುವುದು ಹೇಗೆ, ಭರ್ತಿ ಮಾಡಬೇಕಾದ ಮಾಹಿತಿಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು ೭೦ಕ್ಕೂ ಹೆಚ್ಚು ಬೂತ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಕಾಂಗ್ರೆಸ್ ಪಕ್ಷದ ಬೂತ್ ಎಜೆಂಟ್ (ಬಿಎಲ್‌ಎ-೦೨)ಗಳಿಗೆ ಎಸ್.ಐ.ಆರ್‌ನ ಅಗತ್ಯತೆ, ಫಾರಂ ತುಂಬುವ ವಿಧಾನ ಕುರಿತಂತೆ ಮಾರ್ಗದರ್ಶನ ಮಾಡಿದ್ದು, ಯಾರು ಸಹ ಸಂವಿಧಾನ ಬದ್ದ ಹಕ್ಕಾದ ಮತದಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.