Home ಕ್ರೈಂ ಸುದ್ದಿಗಳು ಪೆಟ್ರೋಲ್ ಬಂಕ್‍ನಲ್ಲಿ ಗುಂಡಿನ ಸದ್ದು!ಬಂಕ್ ಮಾಲೀಕನ ಪಿಸ್ತೂಲ್‍ನಿಂದ ಫೈರಿಂಗ್: ಇಬ್ಬರಿಗೆ ಗಾಯ

ಪೆಟ್ರೋಲ್ ಬಂಕ್‍ನಲ್ಲಿ ಗುಂಡಿನ ಸದ್ದು!ಬಂಕ್ ಮಾಲೀಕನ ಪಿಸ್ತೂಲ್‍ನಿಂದ ಫೈರಿಂಗ್: ಇಬ್ಬರಿಗೆ ಗಾಯ

ವಿಜಯಪುರ, ಸೆ. 21: ಪೆಟ್ರೋಲ್ ಬಂಕ್‍ನಲ್ಲಿ ನಡೆದ ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ಗುಂಡಿನ ದಾಳಿಗೆ ತಿರುಗಿದ ಘಟನೆ ಜಿಲ್ಲೆಯ ಕೊಲ್ಹಾರ ಪೆÇಲೀಸ್ ಠಾಣೆ ವ್ಯಾಪ್ತಿಯ ಮಟ್ಯಾಳ ಗ್ರಾಮದಲ್ಲಿ ವರದಿಯಾಗಿದೆ. ಪೆಟ್ರೋಲ್ ಬಂಕ್ ಮಾಲೀಕನೇ ತನ್ನ ಲೈಸೆನ್ಸ್ ಹೊಂದಿರುವ ಪಿಸ್ತೂಲ್‍ನಿಂದ ಗುಂಡು ಹಾರಿಸಿದ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮಟ್ಯಾಳ ಗ್ರಾಮದ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ (48) ಗುಂಡು ಹಾರಿಸಿದ ಆರೋಪಿಯಾಗಿದ್ದು, ಸುಖದೇವ ಚಲವಾದಿ (30) ಹಾಗೂ ರಾಜು ಚಲವಾದಿ (40) ಗಾಯಗೊಂಡವರು.

ಸ್ನೇಹಿತನೊಂದಿಗೆ ಬಂಕ್‍ಗೆ ಬಂದಿದ್ದ ಸುಖದೇವ

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಖದೇವ ಚಲವಾದಿ ತಮ್ಮ ಸ್ನೇಹಿತ ರಾಜು ಚಲವಾದಿ ಅವರೊಂದಿಗೆ ಪೆಟ್ರೋಲ್ ಬಂಕ್‍ಗೆ ತೆರಳಿದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಬಂಕ್ ಮಾಲೀಕ ಸಂಗಪ್ಪ ಪೂಜಾರಿ ಹಾಗೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ವಾಗ್ವಾದ ತೀವ್ರಗೊಂಡ ಬೆನ್ನಲ್ಲೇ ಬಂಕ್ ಮಾಲೀಕ ತನ್ನ ಲೈಸೆನ್ಸ್ ಪಿಸ್ತೂಲ್‍ನಿಂದ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಗುಂಡಿನ ದಾಳಿಯಲ್ಲಿ ಸುಖದೇವ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜು ಚಲವಾದಿ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪೆÇಲೀಸರ ಭೇಟಿ: ಆರೋಪಿ ವಶಕ್ಕೆ

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗುಂಡು ಹಾರಿಸಿದ ಆರೋಪದ ಮೇಲೆ ಸಂಗಪ್ಪ ಪೂಜಾರಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ Sಔಅಔ ತಂಡ ಪರಿಶೀಲನೆ ನಡೆಸುತ್ತಿದ್ದು, ಗುಂಡಿನ ದಾಳಿಗೆ ನಿಖರ ಕಾರಣವೇನು, ಎಷ್ಟು ಸುತ್ತು ಗುಂಡು ಹಾರಿಸಲಾಗಿದೆ ಎಂಬುದರ ಕುರಿತು ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೆÇಲೀಸರ ಅಧಿಕೃತ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.