
ಕಲಬುರಗಿ: ಕನ್ನಡ ಸಾಹಿತ್ಯ ಅಕಾಡೆಮಿ, ಕಲಬುರಗಿ ಘಟಕದ ವತಿಯಂದ ಅಕಾಡೆಮಿಯ 13ನೇ ವರ್ಷದ ಸಂಭ್ರಮದ ಅಂಗವಾಗಿ ಶರಣತತ್ವ ಚಿಂತನ ಸಮಾವೇಶ ಹಾಗೂ ವೈಚಾರಿಕ ವಿಚಾರ ದರ್ಶನ ಕಾರ್ಯಕ್ರಮವನ್ನು ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿದಂತೆ ಗಣ್ಯರು, ಸಾಹಿತಿಗಳು ಹಾಗೂ ಶರಣತತ್ವ ಚಿಂತಕರು ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ನಗರದ ಎಸ್.ಎಸ್. ಭಾವಿಕಟ್ಟಿ ಪುಸ್ತಕ ವ್ಯಾಪಾರಿಗಳು, ಹಾಗೂ ಶರಣ ಪ್ರಕಾಶನದ ಮಾಲೀಕರಾದ ಮಹೇಶಕುಮಾರ್ ಎಸ್. ಭಾವಿಕಟ್ಟಿ ಅವರಿಗೆ ಕಾಯಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.























