Home ಪಾಕವಿಧಾನ ಹೈದರಾಬಾದಿ ಬಿರಿಯಾನಿ

ಹೈದರಾಬಾದಿ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು
*ಮಟನ್ 1/2 . –
*ಬಾಸುಮತಿ ಅಕ್ಕಿ – 1/2 ಕೆ.ಜಿ
*ಜಾಪತ್ರೆ 1 ಚಮಚ

  • 5
    1 ಚಮಚ
    *ಚಕ್ಕೆ -7-8 ಪೀಸ್
    *ಲವಂಗ 5
    *ಶಾಹಿ ಜೀರಿಗೆ ? 1 ಚಮಚ
    *ಕೇಸರಿ ಸ್ವಲ್ಪ ಹಾಲಿನಲ್ಲಿ ನೆನೆಸಿಡಿ
    *ಹುರಿದ ಈರುಳ್ಳಿ ? 1 ಕಪ್
    *ಪಪ್ಪಾಯಿ ಪೇಸ್ಟ್ – 2 ಚಮಚ
    *ಶುಂಠಿ,ಬೆಳ್ಳುಳ್ಳಿ ಪೇಸ್ಟ್ 3 ಚಮಚ
    *ಅಚ್ಚಖಾರದ ಪುಡಿ 2 ಚಮಚ
    *ಗರಂ ಮಸಾಲ 1 ಚಮಚ
    *ತುಪ್ಪ 5 ಚಮಚ
    *ನಿಂಬೆರಸ 1 ಚಮಚ –
    *ಹಸಿರು ಮೆಣಸಿನಕಾಯಿ 5
    *ಕೊತ್ತಂಬರಿ ಸೊಪ್ಪು – 1/2 ಕಟ್ಟು
    *ಮೊಸರು 1/2 5
    *ಉಪ್ಪು – ರುಚಿಗೆ ತಕ್ಕಷ್ಟು
    *ನೀರು 150 2.
    *ಪುದೀನ ಸೊಪ್ಪು -1/2 ಕಟ್ಟು
    ಮಾಡುವ ವಿಧಾನ: ಅಕ್ಕಿಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿಡಿ. ಬೌಲ್‍ಗೆ ಪಪ್ಪಾಯಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಪೇಸ್ಟ್, ಅರಿಶಿಣ, ಅಚ್ಚಖಾರದಪುಡಿ, ಗರಂ ಮಸಾಲ, ನಿಂಬೆರಸ, ಮೊಸರಿನೊಂದಿಗೆ ಮಟನ್ ಪೀಸ್‍ನ್ನು ಹಾಕಿ ಕಲಸಿ 4-5 ಗಂಟೆಗಳ ಕಾಲ ನೆನೆಸಿಡಿ. ಈರುಳ್ಳಿ ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಿ, ಬಾಣಲಿಯಲ್ಲಿ ನೀರನ್ನು ಕುದಿಸಿ. ಕುದಿಯುವ ನೀರಿಗೆ ಶಾಹಿ ಜೀರಿಗೆ, ಲವಂಗ, ಏಲಕ್ಕಿ ಹಾಕಿರಿ. ಉಪ್ಪು ನೀರಲ್ಲಿ ನೆನೆಸಿದ ಬಾಸುಮತಿ ಅಕ್ಕಿಯನ್ನು ಜಾಪತ್ರೆ ಸೇರಿಸಿ ಕುದಿಯುವ ನೀರಿಗೆ ಸುರಿಯಿರಿ.ಅಕ್ಕಿ ಅರ್ಧ ಬೆಂದಾಗ ತೆಗೆದು ಸೋಸಿಕೊಳ್ಳಿ. ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ, ನೆನೆಸಿಟ್ಟ ಮಟನ್ ಹಾಕಿ, ಇದರ ಮೇಲೆ ಅಕ್ಕಿ, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಹುರಿದ ಈರುಳ್ಳಿ, ಹಾಲಿನಲ್ಲಿ ನೆನೆಸಿದ ಕೇಸರಿ ಒಂದಾದ ನಂತರ ಒಂದನ್ನು ಹಾಕಿ ಲೇಯರ್ ಮಾಡಿ. ಸುತ್ತಲೂ ಮೈದಾಹಿಟ್ಟಿನ ದಂಡೆ ಕಟ್ಟಿ ಮುಚ್ಚಳವನ್ನು ಮುಚ್ಚಿ 1/2 ಗಂಟೆ ಸಣ್ಣ ಉರಿಯಲ್ಲಿ ದಂ ಮಾಡಿ ತೆಗೆದರೆ ಹೈದರಾಬಾದಿ ಬಿರಿಯಾನಿ ರೆಡಿ.