ನವಲಗುಂದ ಪಟ್ಟಣದ ಹೊರ ವಲಯದಲ್ಲಿರುವ ವೀರಶೈವ?ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಜರುಗಿದ ಸಭೆಯಲ್ಲಿ ವೀರಶೈವ?ಲಿಂಗಾಯತ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷರಾಗಿ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಒಮ್ಮತದಿಂದ ಆಯ್ಕೆಯಾದರು. ಅಂದಾನಯ್ಯ ಹಿರೇಮಠ, ಮಡಿವಾಳೆಪ್ಪ ಶಿರಿಯಣ್ಣನವರ, ಅಡಿವೆಪ್ಪ ಮನಮಿ, ಅಣ್ಣಪ್ಪ ಬಾಗಿ, ಸಿದ್ಧಣ್ಣ ಕಿಟಗೇರಿ, ಗುರುಶಾಂತ ಪಲ್ಲೇದ, ರುದ್ರಪ್ಪ ಸವದತ್ತಿ, ರಾಜೇಂದ್ರ ಕಮತರ, ಎಂ.ವಿ. ಹೊಳೆಣ್ಣನವರ, ವೀರಣ್ಣ ಚವಡಿ, ಬಿ.ಕೆ. ಹೂಗಾರ, ಶ್ರೀಮತಿ ಶೈಲಜಾ ಮ. ಮುನೇನಕೊಪ್ಪ, ಮಲ್ಲನಗೌಡ ಪಾಟೀಲ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.