
ಕಲಬುರಗಿ.ಸೆ.22 ಸಾಹಿತ್ಯ,ಸಂಘಟನೆ, ರಂಗಭೂಮಿ, ಚಿತ್ರರಂಗ ಹಾಗೂ ಪತ್ರಿಕೋದ್ಯಮ ಜೊತೆಗೆ, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವದನ್ನು ಪರಿಗಣಿಸಿ ಕಲಬುರ್ಗಿ ಜಿಲ್ಲೆಯ, ಯಡ್ರಾಮಿ ಪಟ್ಟಣದ ಸಾಹಿತಿ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಅವರನ್ನು ಇಂಟರ್ ನ್ಯಾಷನಲ್ ಸ್ಟಾರ್ ಅವಾರ್ಡಗೆ ಆಯ್ಕೆ ಮಾಡಲಾಗಿದೆ.
ಬೆಳಕು ಸಾಹಿತ್ಯ, ಸಾಮಾಜಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸೆ.27ರಂದು ಬೆಂಗಳೂರಿನ ಚಾಮರಾಜಪೇಟೆ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿರುವ 126ನೇ ಚಿಗುರು ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























