
- ತುಳಸಿ ಎಲೆ, ಕರಿಮೆಣಸು, ಹಸಿಈರುಳ್ಳಿ3,ಸಮಪ್ರಮಾಣದಲ್ಲಿ ನುಣ್ಣಗೆ ಅರೆದುಗೋಲಿಗಾತ್ರದ ಉಂಡೆಮಾಡಿ ಬೆಳಿಗ್ಗೆ 2-2 ತಿನ್ನುತ್ತಾ ಬಂದರೆ, 5 -6 ದಿನಗಳಲ್ಲಿ ಮೂಲವ್ಯಾಧಿ ಕಡಿಮೆಯಾಗುವುದು.
- ಆಸನದಲ್ಲಿ ಆಗುವ ಉರಿ, ನೋವು ಇಂತಹ ಸಮಸ್ಯೆಗೆ ನೇರಳೆ ಮರದ ಎಲೆ ಹಾಗೂ ಮಾವಿನಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಬೇರೆ ಬಿಸಿನೀರಿಗೆ ಹಾಕಿ 1 ಟಬ್ನಲ್ಲಿ ಹಾಕಿ 5 ನಿಮಿಷ ಕುಳಿತರೆ ನೋವು ಕಡಿಮೆಯಾಗುತ್ತದೆ.
- ಮಲದ ಜೊತೆ ರಕ್ತ ಹೋಗುತ್ತಿದ್ದರೆ, ನಿಂಬೆಗಿಡದ ಹೂಮತ್ತು ಬೇರನ್ನು ಅರೆದು, ಅಕ್ಕಿತೊಳೆದನೀರಿನಲ್ಲಿ ಕದಡಿ ಕುಡಿದರೆ ಅನುಕೂಲವಾಗುತ್ತದೆ.
- ಸಿಹಿಗುಂಬಳದಚಿಗುರೆಲೆಗಳನ್ನು ಅಡುಗೆಯಲ್ಲಿ ಬಳಸುವುದು ಹಾಗೂ ಸಿಹಿಗುಂಬಳದ ಬಳಕೆ ಎರಡೂಮೂಲವ್ಯಾಧಿಯವರಿಗೆ ಹಿತಕರ.
- ನುಗ್ಗೆ ಎಲೆ ಹಾಗೂ ಎಕ್ಕದ ಎಲೆಯನ್ನು ನುಣ್ಣಗೆ ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಲೇಪಿಸುವುದರಿಂದಮೊಳಕೆಗಳು ದಿನಕ್ರಮೇಣ ನಾಶವಾಗುತ್ತವೆ.
6.ಸುವರ್ಣಗೆಡ್ಡೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಈ ಪುಡಿಯನ್ನು ಹಸಿಮೂಲಂಗಿ ರಸದಲ್ಲಿ ಬೆರೆಸಿ ಪ್ರತಿನಿತ್ಯ ಕೆಲವು ದಿನಗಳ ಕಾಲ ಸತತವಾಗಿ ಸೇವಿಸುವುದರಿಂದಮೂಲವ್ಯಾಧಿ ಹಾಗೂ ಮಲಬದ್ಧತೆ ನಿವಾರಣೆಯಾಗುತ್ತದೆ. - ಹೊನಗೊನೆಸೊಪ್ಪು ಹಾಗೂ ಮೂಲಂಗಿಸೊಪ್ಪಿನ ರಸವನ್ನು ಸತತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ಹಿಂಸೆ, ನೋವು ಕಡಿಮೆಯಾಗುತ್ತದೆ.
- ಒಣಖರ್ಜೂರ ಹಾಗೂ ಒಣದ್ರಾಕ್ಷಿ ಎರಡನ್ನೂ ಚೆನ್ನಾಗಿ ಕುದಿಸಿ ಕಷಾಯ ಮಾಡಿ ಆರಿದ ನಂತರ ಚೆನ್ನಾಗಿ ಕಿವುಚಿ, ನಂತರ ಶೋಧಿಸಿ, ಪುನ: ಆರಿಸಿ ಗಾಜಿನ ಸೀಸೆಗೆ ಹಾಕಿಟ್ಟುಕೊಂಡು ಇದನ್ನು 21 ದಿನಗಳ ಕಾಲ ಕುಡಿದರೆ, ಮಲಬದ್ಧತೆ, ಮೂಲವ್ಯಾಧಿ ಎಲ್ಲಕ್ಕೂ ಉತ್ತಮ ಪರಿಹಾರ ಸಿಗುತ್ತದೆ.
9.ರಕ್ತಮೂಲವ್ಯಾಧಿ: ಹಾಗಲಕಾಯಿ ರಸ ಅಥವಾ ಹಾಗಲಕಾಯಿ ಎಲೆರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಕೆಲವು ದಿನಗಳ ಕಾಲ ಬೆಳಿಗ್ಗೆ ಸೇವಿಸುತ್ತಾ ಬಂದರೆ ರಕ್ತ ಮೂಲವ್ಯಾಧಿಗೆ ಸಾಕಷ್ಟು ಅನುಕೂಲವಾಗುತ್ತದೆ.
10.ಹೆಸರುಕಾಳನ್ನು ನೆನೆಸಿ ಇದಕ್ಕೆ 5- 6 ಬೇವಿನ ಎಲೆಯನ್ನು ಹಾಕಿ ರುಬ್ಬಿಕೊಂಡು ಇದಕ್ಕೆ ಚಿಟಿಕೆ ಉಪ್ಪು ಹಾಕಿ ಕಲಸಿ ತುಪ್ಪದಲ್ಲಿ ಪಕೋಡಾ ರೀತಿ ಕರಿದು 21 ದಿನಗಳ ಕಾಲ ತಿನ್ನುತ್ತಾ ಬಂದರೆ ಹಾಗೂ ಆಹಾರದಲ್ಲಿ ಸ್ವಲ್ಪ ಪತ್ಯ ಇದ್ದರೆ
ಶೀಘ್ರವಾಗಿ ಮೂಲವ್ಯಾಧಿ ಗುಣವಾಗುವುದು. - ಹಸಿಈರುಳ್ಳಿಯನ್ನು ತುರಿದು ತಕ್ಷಣ ಮೊಸರಿಗೆ ಹಾಕಿ ಚಿಟಿಕೆ ಉಪ್ಪು ಹಾಕಿ ಹಾಗೇ ಪ್ರತಿನಿತ್ಯ ಬೆಳಿಗ್ಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿಯ ನೋವು, ಹಿಂಸೆ ಎಲ್ಲವೂ ಕಡಿಮೆ ಆಗುತ್ತದೆ.
- ಹಾಗಲಕಾಯಿ ಗಿಡದ ಬೇರನ್ನು ತಂದು ತೇಯ್ದು ಅದರ ಗಂಧವನ್ನು ಗುದದ್ವಾರಕ್ಕೆ ಲೇಪಿಸುವುದರಿಂದ ಉರಿ, ನೋವು, ಗಾಯ ಆಗಿರುವುದು ಎಲ್ಲದ್ದಕ್ಕೂ ಒಳ್ಳೆಯದು.
- ಮುಟ್ಟಿದರೆ ಮುನಿಸೊಪ್ಪಿನ ಹೂವನ್ನು ಹೊರತುಪಡಿಸಿ ಎಲೆ, ಗಿಡ, ಬೇರು ಸಹಿತ ಸಂಪೂರ್ಣ ಗಿಡವನ್ನು ತೊಳೆದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಂಡು ಅದನ್ನು 7 ದಿನಗಳ ಕಾಲ ಬೆಳಿಗ್ಗೆ ಸಂಜೆ 2 ಬಾರಿ ಸೇವಿಸುತ್ತಾ ಬನ್ನಿ, ಆಹಾರದಲ್ಲಿ ಹಾಲನ್ನ, ಗಂಜಿ ಈ ರೀತಿ ಪಥ್ಯದ ಊಟ ಮಾಡಿದರೆ ಶೀಘ್ರವಾಗಿ ಗುಣವಾಗುತ್ತದೆ.
- 1 ಅಳತೆ ಕರಿಎಳ್ಳಿಗೆ ಅರ್ಧ ಅಳತೆ ಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಅರೆಯಿರಿ. ಅದನ್ನು 1 ಚಮಚದಷ್ಟು ಸೇವಿಸಿ, 1 ಲೋಟ ಆಡಿನ ಹಾಲನ್ನು ಕುಡಿಯುವುದರಿಂದ ಮೂಲವ್ಯಾಧಿಯಲ್ಲಿ ರಕ್ತ ಹೋಗುವುದು ಕಡಿಮೆ ಆಗುತ್ತದೆ.
- ಎಕ್ಕದ ಎಲೆ ಹಾಗೂ ನುಗ್ಗೆಸೊಪ್ಪು ಎರಡನ್ನೂ ಸಮಪ್ರಮಾಣತೆಗೆದುಕೊಂಡು ಅದನ್ನು ನುಣ್ಣಗೆ ಅರೆದು ಗುದದ್ವಾರದಲ್ಲಿ ಲೇಪಿಸುತ್ತಾ ಬಂದರೆ, ಮೂಲವ್ಯಾಧಿಯ ಮೊಳಕೆಯು ಕ್ರಮೇಣ ನಾಶವಾಗುವುದು.
16.ಹುಣಸೆಬೀಜದ ಸಿಪ್ಪೆತೆಗೆದು ಒಳಗಿನ ಬಿಳಿಬಣ್ಣದ ಬೀಜವನ್ನು ನುಣ್ಣಗೆ ಪುಡಿ ಮಾಡಿ ಅದನ್ನು ದಿನಕ್ಕೆ 2 ಬಾರಿ ಸೇವಿಸುತ್ತಾ ಬಂದರೆ ಮೂಲವ್ಯಾಧಿಯು ಗುಣವಾಗುತ್ತದೆ. - ಅಳಲೆಕಾಯಿಚೂರ್ಣವನ್ನು ಬೆಲ್ಲದೊಂದಿಗೆ ಬೆರೆಸಿ ಪ್ರತಿದಿನ ಸೇವಿಸುತ್ತಾಬಂದರೆಮೂಲವ್ಯಾಧಿ ಕ್ರಮೇಣ ಗುಣವಾಗುವುದು.
18.ಅಮೃತಬಳ್ಳಿಯಿಂದತೆಗೆದ ಸತ್ವಕ್ಕೆ ಕಲ್ಲುಸಕ್ಕರೆಯನ್ನು ಪುಡಿಮಾಡಿ ಬೆರೆಸಿಟ್ಟುಕೊಂಡುಇದನ್ನು ಪ್ರತಿದಿನ ಸೇವಿಸುವುದರಿಂದಮೂಲವ್ಯಾಧಿ ಗುಣಮುಖವಾಗಲು ಸಹಕಾರಿಯಾಗುತ್ತದೆ. - ಬಸಳೆ ಸೊಪ್ಪನ್ನು ಪ್ರತಿನಿತ್ಯ ಪಲ್ಯ ಮಾಡಿ ಸೇವಿಸುತ್ತಾ ಬಂದರೆ, ದಿನಕ್ರಮೇಣ ಮೂಲವ್ಯಾಧಿಯ ಹಿಂಸೆ ಕಡಿಮೆ ಆಗುವುದು.
- ಇಸಬ್ಗೋಲ್ ಬೀಜವನ್ನು ರಾತ್ರಿ ಮಲಗುವ ಮುನ್ನ ನೆನೆಸಿ ಸೇವಿಸುವುದರಿಂದ ಮಲಬದ್ಧತೆ ಹಾಗೂಮೂಲವ್ಯಾಧಿ ಹಿಂಸೆ ಕಡಿಮೆ ಆಗುವುದು.