Home ಕ್ರೀಡೆ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಅಭಿಷೇಕ್

30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಅಭಿಷೇಕ್

ನವದೆಹಲಿ, ಸೆ.17- ಆಫ್ಘಾನಿಸ್ತಾನದ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ 30 ಎಸೆತಗಳಲ್ಲಿ
ಶತಕ ಸಿಡಿಸಿ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ.


ಪಂದ್ಯ ಆರಂಭವಾದಾಗಿನಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್, 30 ಎಸೆತಗಳಲ್ಲಿ 10 ಸಿಕ್ಸರ್, 9 ಬೌಂಡರಿ ಬಾರಿಸಿ ಶತಕ ಪೂರೈಸಿದ್ದಾರೆ.


ಈ ಶತಕದ ಮೂಲಕ 13 ವರ್ಷಗಳ ಹಿಂದಿನ ರೋಹಿತ್‌ ಶರ್ಮಾ ಅವರ ದಾಖಲೆಯನ್ನು ಅಭಿಷೇಕ್ ನುಚ್ಚುನೂರು ಮಾಡಿದ್ದಾರೆ.


2017 ರಲ್ಲಿ ರೋಹಿತ್‌ ಶರ್ಮಾ ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು.


ಇದು ಟೀಂ ಇಂಡಿಯಾ ಪರ ದಾಖಲಾದ ವೇಗದ ಟಿ20 ಶತಕ ಆಗಿತ್ತು. ಇದೀಗ ಅಭಿಷೇಕ್‌ ಶರ್ಮಾ ಆ ದಾಖಲೆಯನ್ನು ಆಳಿಸಿ ಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ವೇಗದ ಶತಕ ಬಾರಿಸಿದ 3ನೇ ಆಟಗಾರನಾಗಿ ಅಭಿಷೇಕ್‌ ಶರ್ಮಾ ಹೊರಹೊಮ್ಮಿದ್ದರು.


317.64 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ ಒಟ್ಟು 34 ಎಸೆತಗಲ್ಲಿ 11 ಸಿಕ್ಸರ್‌, 9 ಬೌಂಡರಿ ಸಹಿತ 108 ರನ್‌ ಸಿಡಿಸಿ ಔಟಾದರು.

ಸ್ಪೋಟಕ ಶತಕ ಸಿಡಿಸಿದ ಬ್ಯಾಟರ್ ಗಳು
ಅಭಿಷೇಕ್‌ ಶರ್ಮಾ – 30 ಎಸೆತ – ಫ್ಘಾನಿಸ್ತಾನ ವಿರುದ್ಧ

  • ರೋಹಿತ್‌ ಶರ್ಮಾ – 35 ಎಸೆತ – ಶ್ರೀಲಂಕಾ ವಿರುದ್ಧ
  • ಅಭಿಷೇಕ್‌ ಶರ್ಮಾ – 37 ಎಸೆತ – ಇಂಗ್ಲೆಂಡ್‌ ವಿರುದ್ಧ
  • ಸಂಜು ಸ್ಯಾಮ್ಸನ್‌ – 40 ಎಸೆತ – ಬಾಂಗ್ಲಾದೇಶ ವಿರುದ್ಧ
  • ತಿಲಕ್‌ ವರ್ಮಾ – 41 ಎಸೆತ – ದಕ್ಷಿಣ ಆಫ್ರಿಕಾ ವಿರುದ್ಧ