Home ಜಿಲ್ಲೆ ಕಲಬುರಗಿ ಬಾಸ್ಕೇಟ್ ಬಾಲ್ ಸ್ಪರ್ಧೆ: ಎಸ್‍ಆರ್‍ಎನ್ ಮೆಹತಾ ಶಾಲೆವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಬಾಸ್ಕೇಟ್ ಬಾಲ್ ಸ್ಪರ್ಧೆ: ಎಸ್‍ಆರ್‍ಎನ್ ಮೆಹತಾ ಶಾಲೆವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಕಲಬುರಗಿ,ಸೆ.22: ನಗರದ ಅಕ್ಕಮಹಾದೇವಿ ಕಾಲೋನಿ ಬಾಸ್ಕೇಟ್ ಬಾಲ್ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯವತಿಯಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಬಾಸ್ಕೇಟ ಬಾಲ ಸ್ಪರ್ಧೆಯಲ್ಲಿ ನಗರದ ಎಸ್.ಆರ್.ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಭಾಗ ಮಟ್ಟದ ಕೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ಕ್ರೀಡಾ ಕೂಟವು ರಾಯಚೂರು ಜಿಲ್ಲೆಯಲ್ಲಿ ನಡೆಯಲಿದೆ.
14 ವರ್ಷದ ವಯೋಮಿತಿಯ ಬಾಲಕ/ಬಾಲಕಿಯರು ಪ್ರಥಮ ಸ್ಥಾನವನ್ನು ಹಾಗೂ 17 ವರ್ಷದ ವಯೋಮಿತಿಯ ಬಾಲಕಿಯರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಬಸವರಾಜ ತಳಕೇರಿ, ಬಾಸ್ಕೇಟ ಬಾಲ ತರಬೇತುದಾರ ಶಿರಾಜುದ್ದಿ ಪಾತೆಖಾನಿ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.