
ಬಳ್ಳಾರಿ, ನ. ೨೨- ಲೇಖಕ ರವಿ ಹಂಜ್ ಬರೆದಿರುವ” ಬಸವ ಮಂಟಪ ” ಕೃತಿಯಲ್ಪಿ ಬಸವ ತತ್ವಕ್ಕೆ ವಿರುದ್ಧವಾದ ಬರಹಗಳಿವೆ, ಬಸವಣ್ಣ, ಬಸವ ತತ್ವದ ವಿರುದ್ದ ಅಪಚಾರ ಮಾಡಲೇಬೇಕೆಂದು ಅವರು ಬರೆದಂತಿದೆಂದು ಖ್ಯಾತ ಕಾದಂಬರಿ, ಕಥೆಗಾರ ಕುಂವೀರಭದ್ರಪ್ಪ ಹೇಳಿದ್ದಾರೆ
ಅವರು ಇಂದು ನಗರದಲ್ಲಿ ತಮನ್ನು ಭೇಟಿಮಾಡಿದ ಮಾಧ್ಯಮಗಳ ಜೊತೆ ಮಾತನಾಡಿ, ಬಸವ ಮಂಟಪ ಪುಸ್ತಕ ಬರೆದ ರವಿ ಹಂಜ್ ಅಂತಹವರನ್ನು ಆರ್ ಎಸ್ ಎಸ್ ಮತ್ತು ಬಿಜೆಪಿ ವ್ಯವಸ್ಥೆ ಬೆಳಸುತ್ತಿದೆ ಎಂದು ಗಂಭೀರ ಅರೋಪ ಮಾಡಿರುವ ಕುಂವೀ.
ಹುತ್ತ ಬಡಿದ್ರೇ ಹಾವು ಸಾಯಲ್ಲ ಹುತ್ತದಿಂದ ಹಾವನ್ನು ಹೊರಗೆ ತೆಗೆದು ಬಡಿಯಬೇಕು ಎಂದಿದ್ದಾರೆ.
ರವಿ ಹಂಜ್ ಅನ್ನುವ ಹುತ್ತದಲ್ಲಿರೋ ಆರ್ ಎಸ್ ಎಸ್ ಎನ್ನುವ ಹಾವು ಹೊರ ತೆಗೆದ ಬಡಿಯಬೇಕು.
ರವಿ ಹಂಜ್ ಸಾಹಿತಿ ಅಲ್ಲ ಕೇವಲ ಲೇಖಕ ಮಾತ್ರ. ಯಾವುದೇ ಸಂಶೋಧನೆ ಮಾಡಿಲ್ಲ ಕೇವಲ ಪುರಾಣದ ಆಧಾರದ ಮೇಲೆ ಬರೆದಿದ್ದಾರೆ. ಪುರಾಣಗಳು ಇತಿಹಾಸ ಅಗಲ್ಲ ಪುರಾಣ ಅಂದ್ರೇ ಪುರಾನಾ ( ಹಳೆಯದ್ದು) ಎಂದು ಅರ್ಥವಾಗುತ್ತದೆ ಅಷ್ಟೇ ಎಂದರು.
ಕಳೆದ ೧೨ ಶತಮಾನದಿಂದಲೂ ಬಸವಣ್ಣನವರನ್ನು ಅಪಮೌಲ್ಯ, ನಗಣ್ಯ ಮಾಡುವ ಕೆಲಸ ನಡೆಯುತ್ತಿದೆ
ಸಾಮಾಜದ ಅನಿಷ್ಠ ಪದ್ದತಿಗಳ ವಿರುದ್ಧ ಹೋರಾಟ ಮಾಡಿದ ಅವರನ್ನು ಸೆದೆ ಬಡೆಯೋ ಕೆಲಸ ನಿರಂತರವಾಗಿ ನಡೆಯುತ್ತಿದೆ.ವೈಚಾರಿಕತೆ ಮೇಲೆ ಅಕ್ರಮಣ ನಿರಂತರವಾಗಿ ನಡೆಯುತ್ತಿದೆ.
ಬಸವಣ್ಣನವರು ಕೇವಲ ವೀರಶೈವ,ಲಿಂಗಾಯತ ಎಂಬ ಎರಡು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ನಿರ್ಲಕ್ಷಿತ ಎಲ್ಲಾ ಸಮುದಾಯಗಳನ್ನು ಒಟ್ಟು ಗೂಡಿಸಿದ್ದರು.
ಪಂಚಮ ಸಾಲಿ, ಬಣಜಿಗರಷ್ಡೇ ಲಿಂಗಾಯತರಲ್ಲ ಲಿಂಗಾಯತರಲ್ಲಿ ಸಾಕಷ್ಟು ಒಳ ಸಮುದಾಯಗಳಿವೆ.
ರಂವಿಹಂಜೆ ವಿರುದ್ಧ ಎಲ್ಲಾ ಸಮುದಾಯ ಹೋರಾಟ ಮಾಡಬೇಕಿದೆಂದರು.























