Home ಸಿನೆಮಾ ಬಾಲಿವುಡ್ ಏಕ್ತಾ ಕಪೂರ್ ಅವರ ಹೊಸ ಹಾರರ್ ಚಿತ್ರದ ಭಯಾನಕ ಫಸ್ಟ್ ಲುಕ್ ಬಿಡುಗಡೆ

ಏಕ್ತಾ ಕಪೂರ್ ಅವರ ಹೊಸ ಹಾರರ್ ಚಿತ್ರದ ಭಯಾನಕ ಫಸ್ಟ್ ಲುಕ್ ಬಿಡುಗಡೆ

ಬಾಲಿವುಡ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಹಾರರ್ ಮತ್ತು ಅಲೌಕಿಕ ಕಥಾಹಂದರದ ಚಿತ್ರಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಇದೇ ಸಾಲಿಗೆ ಈಗ ಮತ್ತೊಂದು ಕುತೂಹಲಕಾರಿ ಸಿನಿಮಾ ಸೇರ್ಪಡೆಯಾಗಿದೆ. ಖ್ಯಾತ ನಿರ್ಮಾಪಕರಾದ ಏಕ್ತಾ ಆರ್. ಕಪೂರ್ ಮತ್ತು ಅಮರ್ ಬುಟಾಲಾ ತಮ್ಮ ನೂತನ ಹಾರರ್-ಕಾಮಿಡಿ ಚಿತ್ರ ಹೀರೋ ಕಿ ಹಾರರಿನ್' ನ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೆÇೀಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ವಿಶೇಷವೆಂದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಅಪಶಕುನವೆಂದು ಪರಿಗಣಿಸಲಾಗುವ ಶುಕ್ರವಾರ 13′ ರಂದೇ ಚಿತ್ರತಂಡ ಈ ಭಯಾನಕ ಪೆÇೀಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.


ಸಾಜಿದ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಜೈ ಹೋ ಮೀಡಿಯಾ ವೆಂಚರ್ಸ್ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಬ್ಯಾನರ್‍ಗಳ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ. ಬಿಡುಗಡೆಯಾಗಿರುವ ಮೋಷನ್ ಪೆÇೀಸ್ಟರ್ ಮತ್ತು ಫಸ್ಟ್ ಲುಕ್ ಎಂಥವರನ್ನೂ ಒಮ್ಮೆ ಬೆಚ್ಚಿಬೀಳಿಸುವಂತಿದೆ. ಕಪ್ಪು ಹಾಗೂ ದಟ್ಟ ಹೊಗೆಯ ಹಿನ್ನೆಲೆಯಲ್ಲಿ ರಕ್ತಸಿಕ್ತ ಕೆಂಪು ಸೀರೆಯುಟ್ಟ ಭಯಾನಕ ಮಹಿಳೆಯ ರೂಪವನ್ನು ಪೆÇೀಸ್ಟರ್‍ನಲ್ಲಿ ತೋರಿಸಲಾಗಿದೆ. ಕೆದರಿದ ಉದ್ದ ಕೂದಲು, ವಿರೂಪಗೊಂಡ ಮುಖ, ದಟ್ಟ ಬಿಳಿ ಕಣ್ಣುಗಳು, ಚೂಪಾದ ಹಲ್ಲುಗಳು ಹಾಗೂ ಉದ್ದನೆಯ ಉಗುರುಗಳನ್ನು ಹೊಂದಿರುವ ಈ ಪಾತ್ರವು ಚಿತ್ರದ ಭಯಾನಕತೆಗೆ ಸಾಕ್ಷಿಯಾಗಿದೆ. ಹೀರೋ' ಮತ್ತು ಹೀರೋಯಿನ್’ ಪದಗಳ ಮಿಶ್ರಣದಂತಿರುವ ಈ ಶೀರ್ಷಿಕೆಯು ಭಯದ ಜೊತೆಗೆ ಭರಪೂರ ಮನರಂಜನೆಯನ್ನೂ ನೀಡುವ ಮುನ್ಸೂಚನೆ ನೀಡಿದೆ.


ಚಿತ್ರತಂಡವು ಪೆÇೀಸ್ಟರ್‍ನಲ್ಲಿ ತಾರಾಗಣದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲವಾದರೂ, ಬಾಲಿವುಡ್ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಆಸಕ್ತಿದಾಯಕ ಕಲಾವಿದರ ದಂಡೇ ಇರಲಿದೆ. ಬಾಲಿವುಡ್‍ನ ಹೀರೋ ನಂ. 1' ಖ್ಯಾತಿಯ ನಟ ಗೋವಿಂದ ಅವರ ಪುತ್ರ ಯಶವರ್ಧನ್ ಅಹುಜಾ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಅವರಿಗೆ ನಾಯಕಿಯಾಗಿ ಲಾಪತಾ ಲೇಡೀಸ್’ ಚಿತ್ರದ ‘ಫೂಲ್ ಕುಮಾರಿ’ ಪಾತ್ರದ ಮೂಲಕ ಮನೆಮಾತಾಗಿರುವ ನಟಿ ನಿತಾಂಶಿ ಗೋಯಲ್ ಅಭಿನಯಿಸಲಿದ್ದಾರೆ. ಅಷ್ಟೇ ಅಲ್ಲದೆ, ಯಶವರ್ಧನ್ ಅವರ ತಾಯಿ ಸುನೀತಾ ಅಹುಜಾ, ಹಿರಿಯ ನಟ ಚಂಕಿ ಪಾಂಡೆ, ಜೇಮಿ ಲಿವರ್, ಬ್ರಿಜೇಂದ್ರ ಕಲಾ ಮತ್ತು ಸಿಮ್ರತ್ ಕೌರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಹುನಿರೀಕ್ಷಿತ ಈ ಹಾರರ್-ಕಾಮಿಡಿ ಸಿನಿಮಾ 2027ರಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ.