Home ಜಿಲ್ಲೆ ಕಲಬುರಗಿ ನ 24 ರಿಂದ ಸಂತೋಷಿಮಾತಾ ಜಾತ್ರಾ ಮಹೋತ್ಸವ

ನ 24 ರಿಂದ ಸಂತೋಷಿಮಾತಾ ಜಾತ್ರಾ ಮಹೋತ್ಸವ

ಕಲಬುರಗಿ,ನ.22: ಬೀದರ ನಗರದಲ್ಲಿ ನ. 24 ರಿಂದ 26ರ ವರೆಗೆ ಸಂತೋಷಿ ಮಾತಾಜಿ ಜಾತ್ರಾ ಮಹೋತ್ಸವ
ನಡೆಯುವದು.
ಬೀದರ ನಗರದ ಪತ್ತೆದರವಾಜಾ, (ವಿಜಯ ಮಹಾದ್ವಾರ), ಪನಸಾಲ ತಾಲೀಮಶ್ರೀ ಸಂಸ್ಥಾನ ಸಂತೋಷಿ ಮಾತಾ ಮಂದಿರದ ಆವರಣದಲ್ಲಿ ಜಾತ್ರಾ ಮಹೋತ್ಸವ ಜರುಗುವದು
ನ 24 ರಂದು ಬೆಳಗ್ಗೆ 8 ರಿಂದ ಧ್ವಜಾರೋಹಣ, ಶ್ರೀಗಳಿಂದ ಪೂಜಾ ಕಳಸ ಪ್ರತಿಷ್ಠಾಪನೆ, ಅಭಿಷೇಕ, ಮಂಗಳ ಆರತಿ,ತೀರ್ಥ ಮಧ್ಯಾಹ್ನ ಶ್ರೀಗಳ ಪಾದಪೂಜೆ ನಂತರ ಪಲ್ಲಕ್ಕಿ,ಆರತಿ, ಉರುಳು ಸೇವೆ, ಮಹಾಪ್ರಸಾದ ಭಕ್ತರಿಂದ ಭಜನೆ ಕಾರ್ಯಕ್ರಮ ನಡೆಯುವುದು.
ನ.25 ರಂದು ಬೆಳಿಗ್ಗೆ 9 ಕ್ಕೆಭಕ್ತರಿಂದ ಅಭಿಷೇಕ ಮಹಾಪೂಜೆ, ಹವನ, ಮಹಾ ಪ್ರಸಾದ, ಮನೋರಂಜನೆ, ಶ್ರೀಗಳ ಸನ್ನಧಿಯಲ್ಲಿ ಸಂಗೀತ ದರಬಾರ, ಶ್ರೀಗಳ ಆಗಮನ, ಪುಷ್ಪರೋಹಣ, ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು.ನ.26 ರಂದು ಬೆಳಗ್ಗೆ 8 ಗಂಟೆಗೆ ಮಾತಾಜಿಯವರ ಪಲ್ಲಕಿ ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ಹೊರಡುವುದು. ಮೆರವಣಿಗೆ ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.