Home ಜಿಲ್ಲೆ ಕಲಬುರಗಿ ಚಿಂಚೋಳಿ ವಾರಿಯರ್ಸಗೆ ಭರ್ಜರಿ ಗೆಲುವು

ಚಿಂಚೋಳಿ ವಾರಿಯರ್ಸಗೆ ಭರ್ಜರಿ ಗೆಲುವು

ಕಲಬುರಗಿ :ನಗರದ ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯ ಮತ್ತು ಮೂನ್ ಕ್ರಿಕೆಟ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿರುವ ಕಲ್ಬುರ್ಗಿ ಪ್ರೀಮಿಯರ್ ಲೀಗ್-2026, 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಮೆಂಟನ 3ನೇ ಪಂದ್ಯದಲ್ಲಿ ಕಮಲಾಪುರ ರಾಯಲ್ಸ ತಂಡವನ್ನು 187 ರನ್ ಗಳ ಅಂತರದಿಂದ ಚಿಂಚೋಳಿ ವಾರಿಯರ್ಸ್ ತಂಡವು ಮಣಿಸಿದೆ. ಟಾಸ್ ಗೆದ್ದು ಮೊದಲ ಬ್ಯಾಟಿಂಗ ಆಯ್ದುಕೊಂಡ ಚಿಂಚೋಳಿ ವಾರಿಯರ್ಸ್ ತಂಡವು 45.2 ಓವರ್‍ಗಳಲ್ಲಿ 273 ರನ ಗಳಿಗೆ ಆಲ್ ಔಟ ಆಗುವ ಮೂಲಕ ಸವಾಲಿನ ಮೊತ್ತ ಕಲೆಹಾಕಿತು. ತಂಡದ ಪರ ಪ್ರಜ್ವಲ್ ಕಿತ್ತಾಡ 11 ಬೌಂಡರಿ ಸಹಿತ 71(62) ಹಾಗೂ ಕಾರ್ತಿಕ ರಾಥೋಡ 9 ಬೌಂಡರಿ,2 ಸಿಕ್ಸರ ಸಹಿತ 70(62) ರನ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಇವರಿಗೆ ಸಾಥ ನೀಡಿದ ಇರ್ಫಾನ ಅಜೇಯ 26 ರನ್ ಗಳಿಸಿದರೆ,ಇತರೆ ರೂಪದಲ್ಲಿ 42 ರನಗಳು ತಂಡಕ್ಕೆ ಹರಿದುಬಂದವು. ಕಮಲಾಪುರ ರಾಯಲ್ಸ ಪರ ಉತ್ತಮ ಬೌಲಿಂಗ ಪ್ರದರ್ಶಿಸಿದ ದೇವ ಸುತ್ರಾವೆ 9.2 ಓವರ್‍ಗಳಲ್ಲಿ 38 ರನ್ ನೀಡಿ 4 ವಿಕೆಟ ಪಡೆದರೆ, ಅಭಿಷೇಕ ಸಿಂದಗಿ 6 ಓವರ್‍ಗಳಲ್ಲಿ 36 ರನ್ ನೀಡಿ 2 ವಿಕೆಟ ಕಬಳಿಸಿದರು.
274 ರನಗಳ ಕಠಿಣ ಗುರಿ ಬೆನ್ನತ್ತಿದ ಕಮಲಾಪುರ ರಾಯಲ್ಸ ಚಿಂಚೋಳಿ ವಾರಿಯರ್ಸ್ ಬೌಲರ್ ಗಳ ದಾಳಿಗೆ ತತ್ತರಿಸಿತು. ಕೇವಲ 18.1 ಓವರ್‍ಗಳಲ್ಲಿ 86 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ತಂಡದ ಪರ ಆಯುಷ ಚವ್ಹಾಣ 30(18) ಮತ್ತು ಅಭಿಷೇಕ 18(30) ಹೊರತುಪಡಿಸಿ ಉಳಿದ ಬ್ಯಾಟ್ಸ್‍ಮನಗಳು ವಿಫಲರಾದರು.
ಚಿಂಚೋಳಿ ವಾರಿಯರ್ಸ್ ಪರ ಮಾರಕ ಬೌಲಿಂಗ ದಾಳಿ ನಡೆಸಿದ ಶುಭಂ 2 ಮೇಡನ ಓವರ ಎಸದು ಯಾವುದೇ ರನ್ ನೀಡದೆ 3 ವಿಕೆಟ ಪಡೆದರೆ,ಯಶ್ ನಿಶಾದ 7 ಓವರ್‍ಗಳಲ್ಲಿ 47 ರನ್ ನೀಡಿ 3 ವಿಕೆಟ ಹಾಗೂ ಇರ್ಫಾನ್ 4 ಓವರಗಳಲ್ಲಿ 14 ರನ್.ನೀಡಿ 2 ವಿಕೆಟ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉತ್ತಮ ಬ್ಯಾಟಿಂಗ ಪ್ರದರ್ಶಿಸಿದ ಕಾರ್ತಿಕ ರಾಥೋಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.