Home ಜಿಲ್ಲೆ ದೇವರಹಳ್ಳಿ: ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಬಾರುಕೋಲು ಚಳವಳಿ !

ದೇವರಹಳ್ಳಿ: ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಬಾರುಕೋಲು ಚಳವಳಿ !

ಗುರುಮಠಕಲ್,ನ.22-ತಾಲೂಕಿನ ಗುರುಮಠಕಲ್ ಮತಕ್ಷೇತ್ರದಲ್ಲಿರುವ ಗಾಜಾರಕೋಟ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಬರುವ ದೇವರಹಳ್ಳಿ ಗ್ರಾಮ ಸ್ವಾತಂತ್ರ್ಯ ಸಿಕ್ಕು 80 ವರ್ಷ ಗತಿಸಿದರು ಇಲ್ಲಿಯವರೆಗೂ ಇನ್ನು ಅಭಿವೃದ್ಧಿಯಾಗಿಲ್ಲ. ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯಗಳಿಂದ ಈ ಗ್ರಾಮ ವಂಚಿತವಾಗಿದೆ. ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ಜಾತ್ರಾ ಮಹೋತ್ಸವ ಇದೇ ತಿಂಗಳು 24 ರಂದು ಮಂಗಳವಾರ ನಡೆಯುತ್ತಿದ್ದು ಅದರಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹೆಚ್ಚಾಗಿದೆ. ರೈತರ ಜೇಮೀನಲ್ಲಿರುವ ಪಂಪಸೆಟಗಳ ಮುಖಾಂತರ ಎತ್ತಿನ ಗಾಡಿಗಳಲ್ಲಿ ಡ್ರಮ್ಮುಗಳಲ್ಲಿ ನೀರು ತುಂಬಿಸಿಕೊಂಡು ಕುಡಿಯುವ ಪರಸ್ಥಿತಿ ಎದುರಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಆರೋಪಿಸಿದ್ದಾರೆ.
ಶುಕ್ರವಾರ ಬೆಳಂಬೆಳಗ್ಗೆ ಅವರು ಗ್ರಾಮಕ್ಕೆ ದಿಢೀರನೇ ಭೇಟಿ ನೀಡಿ ಗ್ರಾಮದ ಉದ್ದಕ್ಕೂ ಕಾಲನಡಿಗೆಯಲ್ಲಿ ತಮಟೆ ಬಾರಿಸುವ ಮುಖಾಂತರ ಸಂಚರಿಸಿದ ನಂತರ ಸ್ಥಳದಲ್ಲೇ ಬಾರುಕೋಲ್ ಚಳುವಳಿ ನಡೆಸಿ ಮಾತನಾಡಿದರು. ಗ್ರಾಮದೊಳಗಡೆ ಸೂಕ್ತವಾದ ಚರಂಡಿ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರು ಇಲ್ಲ. ತಗ್ಗುಗುಂಡಿಗಳಲ್ಲಿ ಚರಂಡಿ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಡೆಂಗ್ಯು, ಮಲೇರಿಯಾ ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಸೊಳ್ಳೆಗಳ ಹಾವಳಿಗೆ ಜನ ಜಾನುವಾರುಗಳು ತತ್ತರಿಸಿವೆ ಎಂದು ಕೀಡಿ ಕಾರಿದರು. ಜೊತೆಗೆ ಗ್ರಾಮದಲ್ಲಿ 76 ಲಕ್ಷದಲ್ಲಿ ನಿರ್ಮಾಣವಾದ ಜೇಜಿಯಂ ಕಾಮಗಾರಿ ಸಂಪೂರ್ಣ ಹಳ್ಳ ಹಿಡಿದಿದ್ದು ಅದನ್ನು ತನಿಖೆಗೆ ಒಳಪಡಿಸಬೇಕು ಮತ್ತು ತುರ್ತು ಸಂದರ್ಭದಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಇರದ ಕಾರಣ 108 ಮತ್ತು112 ಕರೆ ಮಾಡಬೇಕೆಂದರೆ ನೆಟ್ವಕ್ನಿರ್ಂದ ಸಾಧ್ಯವಾಗುತ್ತಿಲ್ಲ. ಅದನ್ನು ಸರಿಪಡಿಸಲು ಜಿಲ್ಲಾ ಆಡಳಿತ ಮುಂದಾಗಬೇಕು ತೆರೆದ ಭಾವಿ ಜಾಲಿ ತಂತಿ ಅಳವಡಿಸಬೇಕು, ಗಡ್ಡೆಮೇಲೆ ಇರುವ ಮನೆಗೆ ವಿದ್ಯುತ್ ಸಂಪರ್ಕ ಇರದೆ ಕತ್ತಲಲ್ಲೇ ಬದುಕುವ ಪರಸ್ಥಿತಿ ನಿರ್ಮಾಣ ವಾಗಿದೆ ಅದನ್ನು ತಕ್ಷಣ ಸರಿಪಡಿಸಬೇಕು ಮತ್ತು ಹಾಳಾಗಿ ನಿಂತ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಬೇಕು, ಸುಮಾರು ವರ್ಷಗಳ ಹಿಂದೆ ನಿಮಾರ್ಣವಾಗಿ ಬಳಕೆಗೆ ಬಾರದ ಕುಡಿಯುವ ನೀರಿನ ಟ್ಯಾಂಕ್ ಬಳಕೆಗೆ ಬರುವಂತೆ ಮಾಡಬೇಕು, ಗ್ರಾಮದೊಳಗಡೆ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ತುರ್ತಾಗಿ ಮುಂದಾಗಬೇಕು, ತಗ್ಗುಗುಂಡಿಗಳಲ್ಲಿ ನಿಂತ ಕಲುಷಿತ ನೀರು ಮರಮನಿಂದ ಮುಚ್ಚಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಶಾಲಾ ಕಾಲೇಜಿಗೆ ಹೋಗಲು ಮಕ್ಕಳಿಗೆ ಸರಿಯಾಗಿ ರಸ್ತೆ ಕಲ್ಪಿಸಬೇಕು, ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು, ಕುಡಿಯುವ ನೀರಿನ ಪೈಪಲೈನ್ ಸೋರಿಕೆ ಸರಿಪಡಿಸಿ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು, ಕೆಟ್ಟು ನಿಂತ ಕೈ ಪಂಪ ದುರಸ್ಥಿ ಮಾಡಬೇಕು, ದೇವರಹಳ್ಳಿ ಗ್ರಾಮಕ್ಕೆ ಸಂಪರ್ಕ ಇರುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ಅದನ್ನು ಡಾಂಬರಿಕಾರಣ ಮಾಡಲು ಮುಂದಾಗಬೇಕು, ಗ್ರಾಮದಲ್ಲಿ ಚರಂಡಿ ಮತ್ತು ಕಲುಷಿತ ನೀರನ್ನು ಸಂಪೂರ್ಣ ಸ್ವಚ್ಛತೆ ಮಾಡಿ ಬ್ಲಿಚಿಂಗ್ ಪೌಡರ ಸಿಂಪರಣೆ ಮಾಡಿ ಫಾಗಿಂಗ್ ಮಾಡಿ ಸೊಳ್ಳೆಗಳನ್ನು ನಿಯಂತ್ರಣಕ್ಕೆ ತಂದು ಸಾರ್ವಜನಿಕರಿಗೆ ರೋಗ ಬರದಂತೆ ಅಗತ್ಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ. ಮಲ್ಲೇಶಿ, ರಾಜಪ್ಪ, ಭೀಮಾಶಂಕರ, ಹಣಮಂತು, ಯಲ್ಲಾಲಿಂಗ, ಸಾಬಣ್ಣ, ಬಸ್ಸಪ್ಪ, ಯಲ್ಲಪ್ಪ, ಕಾಶಪ್ಪ, ಉಮೇಶ್, ಯಲ್ಲಪ್ಪ, ಶಿವಪ್ಪ, ಬಸಪ್ಪ, ರೇನಪ್ಪ, ನರಸಪ್ಪ, ಭಗವಂತ, ಯಲ್ಲಾಲಿಂಗ, ಶರಣಪ್ಪ, ಮೋಹನರಡ್ಡಿ, ಶರಣಪ್ಪ, ಬುಗ್ಗಪ್ಪ, ಕಾಶಮ್ಮ, ಬಾಗಮ್ಮ, ಯಲ್ಲಮ್ಮ, ರಾಧಿಕಾ, ರಾಜಮ್ಮ, ಪಾರಾವತಮ್ಮ, ಶರಣಪ್ಪ, ಕಲಾವತಿ, ಹೆಸೆಂತಮ್ಮ, ಕಿಷ್ಟಮ್ಮ, ಚೆಂದಪ್ಪ, ಮೊಗಲಪ್ಪ, ಭೀಮಶೇಪ್ಪ,
ಸೇರಿದಂತೆ ಅನೇಕ ಗ್ರಾಮದ ಮುಖಂಡರು ಮಹಿಳೆಯರು ಯುವಕರು ಈ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿದರು.