
ದುಬೈ, ಅ.೪-ಅಮೆರಿಕ ಮತ್ತು ಇಸ್ರೇಲಿ ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನಗಳನ್ನು ಗುರಿಯಾಗಿ ಸಿಕೊಂಡು ದಾಳಿ ನಡೆಸುವಂತೆ ಅಲ್‌ಖೈದಾ ಕರೆ ನೀಡಿದೆ.
ಅಂತಾರಾಷ್ಟ್ರೀಯ ಉಗ್ರ ಸಂಘಟನೆ ದಾಳಿ ನಡೆಸುವಂತೆ ಕರೆ ನೀಡಿರುವುದನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
೨೦೦೧ರ ಸೆಪ್ಟೆಂಬರ್ ೧೧ರ ದಾಳಿಗಳನ್ನು ಉಲ್ಲೇಖಿಸಿರುವ ಸಂಘಟನೆ, ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿದ್ದ ಎನ್ನಲಾದ ಅಪಹರಣ ಯತ್ನವನ್ನೂ ಅಲ್ ಖೈದಾ ಸಂಘಟನೆ ಪ್ರಸ್ತಾಪಿಸಿದೆ.
ವರದಿಯ ಪ್ರಕಾರ, ಅಲ್‌ಖೈದಾ-ಸಂಬಂಧಿತ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಹರಿದಾಡಿದ ಅರೇಬಿಕ್ ಭಾಷೆಯ ಲೇಖನದಲ್ಲಿ ಅಮೆರಿಕನ್ನರು ಮತ್ತು ಇಸ್ರೇಲಿಯರು ಪ್ರಯಾಣಿಸುವ ವಿಮಾನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂತೆ ಕರೆ ನೀಡಿದೆ.
೨೦೦೧ರ ಸೆಪ್ಟೆಂಬರ್ ೧೧ರ ದಾಳಿಗಳನ್ನು ಉಲ್ಲೇಖಿಸಿ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷ ಇನ್ನೂ ಮುಗಿದಿಲ್ಲ ಎಂದು ಹೇಳಿರುವುದು ಭೀತಿಗೆ ಕಾರಣವಾಗಿದೆ.
ಸೆಪ್ಟೆಂಬರ್ ೩೦ರಂದು ಫ್ಲೈದುಬೈಯ ಈZ೧೦೭೩ ವಿಮಾನದಲ್ಲಿ ನಡೆದಿದ್ದ ಎನ್ನಲಾದ ಅಪಹರಣ ಯತ್ನವನ್ನೂ ಪ್ರಸ್ತಾಪಿಸಲಾಗಿದೆ. ಆ ವಿಮಾನದಲ್ಲಿ ೧೭೦ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು.
ಸೆಪ್ಟೆಂಬರ್ ೧೧ರ ದಾಳಿಯ ಸಂದರ್ಭದಲ್ಲಿ ವಿಶ್ವ ವ್ಯಾಪಾರ ಕೇಂದ್ರಕ್ಕೆ ವಿಮಾನ ಡಿಕ್ಕಿ ಹೊಡೆಯುತ್ತಿ ರುವ ಚಿತ್ರವನ್ನೂ, ಫ್ಲೈದುಬೈ ವಿಮಾನಕ್ಕೆ ಸಂಬಂಧಿಸಿದ ಮತ್ತೊಂದು ಚಿತ್ರವನ್ನೂ ಬಳಸಲಾಗಿತ್ತು.
ಈ ವಿಷಯವನ್ನು ಅಲ್‌ಖೈದಾ-ಸಂಬಂಧಿತ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಈಗಾಗಲೇ ಪ್ರಸಾರ ಮಾಡಲಾಗಿದ್ದು, ನಂತರ ಅದನ್ನು ತೆಗೆದುಹಾಕಲಾಗಿದೆ.























