Home ಜಿಲ್ಲೆ ಬೆಂಗಳೂರು ಹಫ್ತಾ ವಸೂಲಿ ನಿಲ್ಲಿಸಲು ಆಗ್ರಹಿಸಿ ವ್ಯಾಪಾರಿಗಳ ಪ್ರತಿಭಟನೆ

ಹಫ್ತಾ ವಸೂಲಿ ನಿಲ್ಲಿಸಲು ಆಗ್ರಹಿಸಿ ವ್ಯಾಪಾರಿಗಳ ಪ್ರತಿಭಟನೆ

ಕೆ.ಆರ್. ಪುರ,ಜು.೧೬-ಕೆಆರ್ ಪುರ ಸಂತೆ ಮಾರುಕಟ್ಟೆ ಹಾಗೂ ಮಾರುಕಟ್ಟೆಯಿಂದ ಎರಡು ಕಿಲೋಮೀಟರ್ ವರೆಗೆ ಜಿಬಿಎ ಅಧಿಕಾರಿಗಳ ಕುಮ್ಮಕ್ಕಿನಿಂದ ಗುತ್ತಿಗೆದಾರ ವ್ಯಾಪಾರಸ್ಥರಿಂದ ಹಪ್ತ ವಸೂಲಿ ಮಾಡುತ್ತಿದ್ದು,ಇದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕೆ.ಆರ್.ಪುರದ ಸಂತೆ ಬಳಿ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರು ಜಿಬಿಎ ಅಧಿಕಾರಿಗಳ ಕುಮ್ಮಕ್ಕಿನ ರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡಿತ್ತಿದ್ದಾರೆ,ಸಂತೆ ಜಾಗವನ್ನು ಹೊರತುಪಡಿಸಿ ಸಿಕ್ಕ ಸಿಕ್ಕ ಕಡೆ ಅಕ್ರಮ ಸುಂಕ ವಸೂಲಿಮಾಡುತ್ತಿದ್ದಾರೆಂದು ಆರೋಪಿಸಿದರು.

ಸ್ಥಳಕ್ಕೆ ಬೆಂ.ಪೂರ್ವ ನಗರ ಪಾಲಿಕೆ ಆಯುಕ್ತ ರಮೇಶ್ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.
ನಗರದಲ್ಲಿ ಫುಟ್ ಬಾತ್ ತೆರವು ಕಾರ್ಯಾಚರಣೆ ನಡೆದಿದೆ, ಕೆಆರ್ ಪುರ ಭಾಗದಲ್ಲಿ ಸಂತೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಾರೆ.

ಇದರ ಬಗ್ಗೆ ಗಮನ ಹರಿಸದೆ ಲಂಚ ಪಡೆದು ಸುಮ್ಮನಿದ್ದಾರೆಂದು ಸಂಚಾರಿ ಪೊಲೀಸರ ವಿರುದ್ದ ಆರೋಪಿಸಿದರು.
ಈಹಿಂದೆ ಸಂತೆ ಸುತ್ತಳತೆ ಮಾಡಿದ್ದರು. ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,ಸಂತೆ ವ್ಯಾಪ್ತಿ ಗುರುತಿಸಿ ಪುಂಡರಿಂದ ಆಗುತ್ತಿರುವ ವಸೂಲಿ ಕಾರ್ಯವನ್ನು ತಪ್ಪಿಸಬೇಕು
ಎಂದು ನುಡಿದರು.

ಸಂತೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಥಾಸ್ಥಿತಿ ಕಾಪಾಡಲು ತೀರ್ಪಿನ ನಡುವೆಯೂ ತೆರವು ಕಾರ್ಯಚರಣೆ ಮಾಡಿರುವುದ್ದಾರೆ ಎಂದು ದೂರಿದರು.