
ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಗೆ ತ್ಯಾಗ ಪತ್ರ ರವಾನೆ
ನವದೆಹಲಿ, ಜು. ೨೫- ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಜಯಸಿಕ್ಕಿದ್ದು, ಕೊನೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಧರ್ಮೇಂದ್ರ ಪ್ರಧಾನ್ ಇಂದು ಮಧ್ಯಾಹ್ನ ೨.೩೦ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿದರು.
ಕಳೆದ ೨೦ ದಿನಗಳಿಂದ ಕಾಕ್ರೋಚ್ ಜನತಾ ಪಕ್ಷ ನೀಟ್ ಅಕ್ರಮದ ವಿರುದ್ಧ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಿತ್ತು. ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿಯವರು ಮಣಿದು ಧರ್ಮೇಂದ್ರ ಪ್ರಧಾನ್ ರವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸಿದ್ದ ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಬಾರದು ಹಾಗೂ ನೀಟ್ ಪರೀಕ್ಷೆ ರದ್ದತಿಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ೧ ಕೋಟಿ ಪರಿಹಾರ ನೀಡಬೇಕು ಎಂಬ ಬೇಡಿಕೆಗಳನ್ನಿಟ್ಟು ಹೋರಾಟ ನಡೆಸಿತ್ತು.
ವಿದ್ಯಾರ್ಥಿಗಳ ಬೇಡಿಕೆ ಬಗ್ಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಇವರುಗಳು ಸಿಜೆಪಿ ಪಕ್ಷದ ವಕ್ತಾರರಾದ ಸೌರವ್ ದಾಸ್ ಮತ್ತು ಅಸುತೋಷ್ ರಾಂಕ ಇವರುಗಳು ನಿನ್ನೆ ಮತ್ತು ಮೊನ್ನೆ ೨ ಸುತ್ತಿನ ಮಾತುಕತೆ ನಡೆಸಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹೊರತುಪಡಿಸಿ ಉಳಿದ ೨ ಬೇಡಿಕೆ ಈಡೇರಿಕೆಗೆ ಸಮ್ಮತಿಸಿತ್ತು.
ಆದರೆ ಸಿಜೆಪಿ ಪಕ್ಷ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದ ಹೊರತು ಮಾತುಕತೆಗೆ ಅರ್ಥವಿಲ್ಲ ಎಂದು ಹೇಳಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಬಿಗಿ ಪಟ್ಟು ಹಾಕಿತ್ತು.
ವಿದ್ಯಾರ್ಥಿಗಳ ಬಿಗಿ ಪಟ್ಟಿಗೆ, ಹೋರಾಟಕ್ಕೆ ಮಣಿದು ಕೊನೆಗೂ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಸಹ ಕೇಂದ್ರ ಸರ್ಕಾರ ಸಿಜೆಪಿ ಪಕ್ಷದ ಪ್ರತಿನಿಧಿಗಳ ಜತೆ ೩ನೇ ಸುತ್ತಿನ ಮಾತುಕತೆ ನಿಗದಿ ಮಾಡಿತ್ತು. ಈ ೩ನೇ ಸುತ್ತಿನ ಮಾತುಕತೆಗೂ ಮೊದಲೇ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದಿದ್ದ ಹಲವು ದಿನಗಳ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ.
ದೇಶದ ಐಕ್ಯತೆ ಉಳಿಸಲು ರಾಜೀನಾಮೆ
ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ ಹತ್ತು ದಿನಗಳಿಂದ ನಡೆದಿರುವ ಪರಿಸ್ಥಿತಿಯ ಲಾಭವನ್ನು ದೇಶ ವಿರೋಧಿ ಶಕ್ತಿಗಳು ಪಡೆದುಕೊಳ್ಳಬಾರದು ದೇಶದ ಏಕತೆ ಐಕ್ಯತೆ ಉಳಿಯಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ನಿರ್ಧಾರ ಕೈಗೊಂಡಿರುವುದಾಗಿ ಧರ್ಮೇಂದ್ರ ಪ್ರಧಾನ ತಿಳಿಸಿದ್ದಾರೆ. ಧರ್ಮೇಂದ್ರ ಪ್ರಧಾನ ಪ್ರತಿಕ್ರಿಯೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿ ನನ್ನ ವೃತ್ತಿ ಜೀವನದತ್ತ ಗಮನ ಹರಿಸಬೇಕು ಎಂಬುದನ್ನು ಪರಿಗಣಿಸಿ ನಾನು ನನ್ನ ರಾಜೀನಾಮೆಯನ್ನು ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಹತ್ತು ದಿನಗಳ ಬೆಳವಣಿಗೆಯನ್ನು ನೋಡಿ ನನ್ನ ಮನಸ್ಸಿಗೆ ದುಃಖವಾಗಿದೆ ಇದು ನನಗೆ ವೈಯಕ್ತಿಕ ವಿಷಯವಾಗಿರಲಿಲ್ಲ ಭಾರತದಲ್ಲಿ ಯುವಶಕ್ತಿಯೇ ಈ ದೇಶದ ನಿಜವಾದ ಶಕ್ತಿ ದೇಶದ ಯುವಶಕ್ತಿಯನ್ನು ಭ್ರಮೆಯ ಸುಳಿಯಲ್ಲಿ ಸಿಲುಕಿಸಲು ಬಿಡಬಾರದು ಎಂಬುದು ನನ್ನ ಸಂಕಲ್ಪವಾಗಿದೆ ಎಂದು ಅವರು ಹೇಳಿದ್ದಾರೆ
ವಿಡಿಯೋಗೆ ಉತ್ತಮ ಸ್ಪಂದನೆ : ಮೋದಿ ಕೃತಜ್ಞತೆ
ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸರ್ಕಾರ ತೆಗೆದುಕೊಂಡಿರುವ ಯೋಜಿತ ಕ್ರಮದ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
ಧನ್ಯವಾದಗಳು ಸ್ನೇಹಿತರೇ. ನಿನ್ನೆ ರಾತ್ರಿ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ನೀವು ವೀಡಿಯೊಗೆ ಪ್ರತಿಕ್ರಿಯಿಸಿದ ರೀತಿ, ಸಕಾರಾತ್ಮಕ ಸಲಹೆಗಳನ್ನು ಕಳುಹಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ ತಿಳಿಸಿದ್ದಾರೆ.
ಮೊದಲ ವಿಡಿಯೋ ನೋಡಿದ ಲಕ್ಷಾಂತರ ಯುವಕರು ಪರೀಕ್ಷಾ ಪದ್ಧತಿಯನ್ನು ಸುಧಾರಿಸಲು ಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿರುವ ಸಲಹೆಗಳು ಮತ್ತು ಪ್ರಮುಖ ಐಡಿಯಾಗಳನ್ನು ಗಮನಿಸಿದ್ದೇನೆ.
ಪೇಪರ್ ಸೋರಿಕೆ ದಂಧೆಯ ವಿರುದ್ಧ ಸರ್ಕಾರ ತೆಗೆದುಕೊಳ್ಳಲಿರುವ ಕಠಿಣ ಕ್ರಮಗಳಿಗೆ ದೇಶದ ಯುವ ಪೀಳಿಗೆ ತೋರಿರುವ ಬೆಂಬಲವೇ ತಮಗೆ ದೊಡ್ಡ ಶಕ್ತಿ. ತಡರಾತ್ರಿ ಹಂಚಿಕೊಂಡ ವಿಡಿಯೋ ಮೂಲಕ ದೇಶದ ಯುವ ಸಮುದಾಯದೊಂದಿಗೆ ನೇರವಾಗಿ ಸಂರ್ಪಕಿಸಲು ಸಾಧ್ಯವಾಗಿದ್ದು ತಮಗೆ ಹೆಮ್ಮೆ ತಂದಿದೆ. ಯುವಕರ ಅಭಿಪ್ರಾಯಗಳನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮುಂದುವರಿಸಲು ಯುವಜನತೆಯ ಈ ನಿರಂತರ ಸಂವಾದ ಅಗತ್ಯ ಎಂದು ಮೋದಿ ಹೇಳಿದ್ದಾರೆ.































