
ಕಲಬುರಗಿ,ಜು.25-ಎನ್‍ಎಸ್‍ಎಸ್ ಅಂದರೆ ಕೇವಲ ಕಸಗುಡಿಸುವುದು ಅಲ್ಲ, ಮನಸ್ಸು ಕಟ್ಟುವ ಕೆಲಸ ಎಂದು ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಸಂತ ವಿ.ನಾಶಿ ಹೇಳಿದರು.
ನಗರದ ಆಳಂದ್ ಚೆಕ್ ಪೆÇೀಸ್ಟ್ ಹತ್ತಿರದ ಜಾಪ್ರಾಬಾದ್ ಗ್ರಾಮದಲ್ಲಿ ಏರ್ಪಡಿಸಿದ 2026ರ ಎನ್‍ಎಸ್‍ಎಸ್ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು,
ಎನ್‍ಎಸ್‍ಎಸ್ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವುದರಲ್ಲಿ ಅಡಗಿದೆ. ಸೇವೆಯ ಮೂಲಕ ಶಿಕ್ಷಣ ವಿದ್ಯಾರ್ಥಿಗಳು ಪುಸ್ತಕದ ಜ್ಞಾನದೊಂದಿಗೆ ಸಮಾಜ ಸೇವೆಯ ನೈಜ ಅನುಭವ ಪಡೆಯುವುದು. ವ್ಯಕ್ತಿತ್ವ ವಿಕಸನ ನಾಯಕತ್ವ ಗುಣ, ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವೃದ್ಧಿಸಿಕೊಳ್ಳುವುದು. ನನಗಾಗಿ ಅಲ್ಲ, ನಿಮಗಾಗಿ’ ಎನ್ನುವ ತತ್ವದ ಮೂಲಕ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳುವುದಾಗಿದೆ ಎಂದರು.
ಕಾಲೇಜಿನ ಅಧಿಕಾರಿಗಳಾದ ಡಾ.ಸೌಮ್ಯ, ಡಾ.ಗಜೇಂದ್ರ ಉಪಸ್ಥಿತರಿದ್ದರು. ಊರಿನ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.































