Home ಸಿನೆಮಾ ‘ತದ್ವಿರುದ್ಧ’ ಚಿತ್ರತಂಡಕ್ಕೆ ಶ್ರೀ ಮಧುಸೂದನ ಸಾಯಿ ಗುರೂಜಿ ಆಶೀರ್ವಾದ

‘ತದ್ವಿರುದ್ಧ’ ಚಿತ್ರತಂಡಕ್ಕೆ ಶ್ರೀ ಮಧುಸೂದನ ಸಾಯಿ ಗುರೂಜಿ ಆಶೀರ್ವಾದ

ವಿಭಿನ್ನ ಕಥಾಹಂದರದ ಮೂಲಕ ಕುತೂಹಲ ಮೂಡಿಸಿರುವ ‘ತದ್ವಿರುದ್ಧ’ ಚಿತ್ರದ ಟೀಸರ್‌ಗೆ ಶ್ರೀ ಮಧುಸೂದನ ಸಾಯಿ ಗುರೂಜಿ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಮುದ್ದೇನಹಳ್ಳಿಯ ಸತ್ಯಸಾಯಿಗ್ರಾಮದಲ್ಲಿ ಗುರೂಜಿ ಚಿತ್ರದ ಟೀಸರ್ ವೀಕ್ಷಿಸಿ, ಸಿನಿಮಾ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ನಟ ಸುಚೇಂದ್ರ ಪ್ರಸಾದ್, ನಟ ವಿಕ್ರಮ್ ರಾಮಯ್ಯ, ನಟಿ ಐಶ್ವರ್ಯ ಶೆಟ್ಟಿ, ನಿರ್ಮಾಪಕರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಜೊತೆಗೆ ನರಸಿಂಹಮೂರ್ತಿ, ಗೋವಿಂದ ರೆಡ್ಡಿ, ವೆಂಕಟೇಶ್ ಸೇರಿದಂತೆ ಹಲವು ಗಣ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕನ್ನಡದಲ್ಲಿ ಉತ್ತಮ ಕಥಾವಸ್ತುವಿನ ಚಿತ್ರಗಳಿಗೆ ಸದಾ ಪ್ರೇಕ್ಷಕರ ಬೆಂಬಲ ದೊರೆತಿರುವುದನ್ನು ಉಲ್ಲೇಖಿಸಿದ ಗುರೂಜಿ, ‘ತದ್ವಿರುದ್ಧ’ ಚಿತ್ರದ ಟೀಸರ್ ಉತ್ತಮವಾಗಿ ಮೂಡಿಬಂದಿದ್ದು, ಚಿತ್ರವೂ ಯಶಸ್ಸು ಕಾಣಲಿ ಎಂದು ಹಾರೈಸಿದರು.

CHARMION MOTION PICTURES ನಿರ್ಮಾಣದ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್ ಹಾಗೂ ವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿನೋದ್ ಜೆ. ರಾಜ್ ನಿರ್ದೇಶನದ ಈ ಸಿನಿಮಾ ವಿಭಿನ್ನ ಕಂಟೆಂಟ್‌ನೊಂದಿಗೆ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.