
ಕಲಬುರಗಿ: ವಿರೋಧ ಪಕ್ಷಗಳು ನೀಟ್ ಕುರಿತು ಚರ್ಚಿಸದೇ ಬದಲಾಗಿ ದೇಶದಲ್ಲಿ ಅರಾಜಕತೆಯನ್ನು ಉಂಟು ಮಾಡುತ್ತಿರುವದನ್ನು ಖಂಡಿಸಿ ಇಂದು ಬಿಜೆಪಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ನಿರತ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಬಿಜೆಪಿ ಮುಖಂಡರಾದ ದತ್ತಾತ್ರೇಯ ಪಾಟೀಲ ರೇವೂರ, ಅಮರನಾಥ ಪಾಟೀಲ,ದೇವೇಂದ್ರ ದೇಸಾಯಿ ಕಲ್ಲೂರ,ಅಶೋಕ ಬಗಲಿ,ಶರಣಪ್ಪ ತಳವಾರ,ರಾಜು ವಾಡೇಕರ್,ಸಂತೋಷ ಹಾದಿಮನಿ,ನಾಮದೇವ ರಾಠೋಡ ಅವರು ಸೇರಿದಂತೆ ಹಲವರು ಪಾಲ್ಗೊಂಡರು.































