Home ಜಿಲ್ಲೆ ಕಲಬುರಗಿ ಸಿಯುಕೆ: ಸಹಜೀವನದ ವಿಕಸನ; ವಿಚಾರ ಸಂಕಿರಣದ ಪೋಸ್ಟರ್ ಬಿಡುಗಡೆ

ಸಿಯುಕೆ: ಸಹಜೀವನದ ವಿಕಸನ; ವಿಚಾರ ಸಂಕಿರಣದ ಪೋಸ್ಟರ್ ಬಿಡುಗಡೆ

ಕಲಬುರಗಿ,ಜು.25: ಕರ್ನಾಟಕ ಕೇದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕಾನೂನು ವಿಭಾಗ ಮತ್ತು ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಸಹಯೋಗದೊಂದಿಗೆ “ಸಹಜೀವನದ ವಿಕಸನ: ವಿವಾಹ ಮತ್ತು ಲಿವ್-ಇನ್ ಸಂಬಂಧಗಳಲ್ಲಿನ ಪಾವಿತ್ರ್ಯ, ಕಾನೂನುಬದ್ಧತೆ ಹಾಗೂ ಸಾಮಾಜಿಕ ಆಯಾಮಗಳು” ಎಂಬ ವಿಷಯದ ಕುರಿತು ಆಗಸ್ಟ್ 18 ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಈ ರಾಷ್ಟ್ರೀಯ ವಿಚಾರ ಸಂಕಿರಣದ ಪೂರ್ವಭಾವಿಯಾಗಿ ಪೆÇೀಸ್ಟರ್‍ನ್ನು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಾನೂನು ಅಧ್ಯಯನ ನಿಕಯಾದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ, ಕಾನೂನು ವಿಭಾಗದ ಮುಖ್ಯಸ್ಥರಾದ ಡಾ. ಅನಂತ ಡಿ. ಚಿಂಚುರೆ, ವಿಚಾರ ಸಂಕಿರಣದ ಸಂಚಾಲಕ ಡಾ. ರೇಣುಕಾ ಎಸ್. ಗುಬ್ಬೇವಾಡ್ ಹಾಗೂ ವಿಭಾಗದ ಅಧ್ಯಾಪಕರಾದ ಡಾ. ಶಶಿರೇಖಾ ಮಾಳಗಿ, ಡಾ. ಜಗದೀಶ್ ಚಂದ್ರ ಟಿ.ಜಿ., ಡಾ. ಜಯಂತ ಬೋರುವಾ, ಡಾ. ಕೆ.ಎಂ. ಕೃಷ್ಣ ಶೇಖರ್ ಶರ್ಮಾ, ಪಿ. ವೈಷ್ಣವಿ ನಾರಾಯಣಿ, ಡಾ. ನಿಕಿತಾ ಚೌಧರಿ ಹಾಗೂ ಜುನು ದಾಸ್ ಅವರು ಉಪಸ್ಥಿತರಿದ್ದರು.
ಶಿಕ್ಷಣ ತಜ್ಞರು, ಸಂಶೋಧಕರು, ಕಾನೂನು ವೃತ್ತಿಪರರು, ನ್ಯಾಯಾಂಗ ಕ್ಷೇತ್ರದ ಅಧಿಕಾರಿಗಳು, ನೀತಿ ನಿರೂಪಕರು ಹಾಗೂ ವಿದ್ಯಾರ್ಥಿಗಳ ನಡುವೆ “ಸಹಜೀವನದ ವಿಕಸನ: ವಿವಾಹ ಮತ್ತು ಲಿವ್-ಇನ್ ಸಂಬಂಧಗಳ ಕಾನೂನು, ಸಾಮಾಜಿಕ, ಸಾಂಸ್ಕøತಿಕ ಹಾಗೂ ತಾತ್ವಿಕ ಆಯಾಮಗಳ ಕುರಿತು ಚರ್ಚೆ ನಡೆಯಲಿದೆ.
ವಿಚಾರ ಸಂಕಿರಣದಲ್ಲಿ ಸಂಸ್ಕಾರಯುತ ವಿವಾಹ, ವಿವಾಹದ ಕಾನೂನು ಕಟ್ಟಳೆಗಳು, ಸಹಜೀವನ ವಿಕಸನ, ಲಿವ್-ಇನ್ ಸಂಬಂಧಗಳು, ಮಹಿಳೆಯರ ಘನತೆ ಮತ್ತು ಅವರ ಹಕ್ಕುಗಳು, ಸಪ್ತಪದಿ, ಆರ್ಥಿಕ ಸ್ವಾಯತ್ತತೆ ಹಾಗೂ ಸಾಂಪ್ರದಾಯಿಕವಾದ ಪದ್ಧತಿಗಳು ಮತ್ತು ಆಧುನಿಕ ಕಾನೂನಿನ ನಡುವಿನ ಸಂಬಂಧಗಳು ಸೇರಿದಂತೆ ಹಲವಾರು ಸಮಕಾಲೀನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಈ ಸಂದರ್ಭದಲ್ಲಿ ಸಂಶೋಧನಾ ಪ್ರಬಂಧಗಳನ್ನು ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ಮಂಡಿಸಲು ಅವಕಾಶ ನೀಡಲಾಗಿದೆ.
ವಿಸ್ತೃತವಾದ ಸಾರಾಂಶ ಸಲ್ಲಿಕೆಗೆ ಆಗಸ್ಟ್ 8 ರಂದು, ನೋಂದಣಿಗೆ ಕೊನೆಯ ದಿನ ಆಗಸ್ಟ್ 15 ಆಗಿರುತ್ತದೆ, ವಿಚಾರ ಸಂಕಿರಣವು ಆಗಸ್ಟ್ 18 ರಂದು ವಿ.ವಿ. ಆವರಣದಲ್ಲಿ ನಡೆಯಲಿದೆ.
ಶಿಕ್ಷಣ ತಜ್ಞರು ಹಾಗೂ ಕಾನೂನು ವೃತ್ತಿಪರರು ರೂ.500, ಸಂಶೋಧನಾ ವಿದ್ಯಾರ್ಥಿಗಳಿಗೆ ರೂ 300 ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ.200 ಶುಲ್ಕವಿರುತ್ತದೆ,
ಹೆಚ್ಚಿನ ಮಾಹಿತಿಗಾಗಿ ವಿ.ವಿ.ಯ ಸಂಶೋಧನಾ ವಿದ್ಯಾರ್ಥಿಗಳಾದ ಲಗಿಡಿ ಅರುಣ್ ಕುಮಾರ್ ರಾಜು (7675907584) ರೋಹಿಂತ್ ಟಿ. (7904437426) ಹಾಗೂ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್‍ನ ಮಹಾದೇವಯ್ಯ ಕರದಳ್ಳಿ (9483097894) ಅವರನ್ನು ಸಂಪರ್ಕಿಸಬಹುದಾಗಿದೆ.