
ಕಲಬುರಗಿ: ನಗರದ ಕನ್ನಡಭವನದಲ್ಲಿಂದು ಶರಣಮಾರ್ಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಿಂಗಣ್ಣ ಸತ್ಯಂಪೇಟೆ ಅವರ 14 ನೇ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ. ಬಿ.ಎಸ್ ಸುಧಾಕರ ಅವರಿಗೆ ‘ಬಸವಮಾರ್ಗ’ ಪ್ರಶಸ್ತಿ ಪ್ರದಾನ ಮತ್ತು ‘ಅಪ್ಪನ ಒಡನಾಟ’ ಗ್ರಂಥ ಲೋಕಾರ್ಪಣೆ ಜರುಗಿತು.ಮುದಗಲ್ ಕಲ್ಯಾಣಾಶ್ರಮದ ಮಹಾಂತಸ್ವಾಮಿಗಳು,ಡಾ.ವಿಲಾಸವತಿ ಖೂಬಾ,ಬಿ.ಆರ್ ಪಾಟೀಲ,ಎಸ್.ಕೆ ಕಾಂತಾ,ಚನ್ನಾರೆಡ್ಡಿ ಪಾಟೀಲ,ಸಿದ್ಧರಾಮ ಹೊನ್ಕಲ್,ರವೀಂದ್ರ ಶಾಬಾದಿ,ವಿಜಯಕುಮಾರ ಪಾಟೀಲ ತೇಗಲತಿಪ್ಪಿ,ಡಾ.ಅಶೋಕ ದೊಡ್ಡಮನಿ,ವಿಶ್ವಾರಾಧ್ಯ ಸತ್ಯಂಪೇಟೆ,ಡಾ.ಶಿವರಂಜನ ಸತ್ಯಂಪೇಟೆ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.































