ಕಲಬುರಗಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಜಂತರ್ ಮಂತರ್ ಲಾಠಿಚಾರ್ಜ್ ಖಂಡಿಸಿ ಇಂದು ಯಂಗ್ ಡೆಮಾಕ್ರಾಟ್ಸ್ ವತಿಯಿಂದ ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಯಂಗ್ ಡೆಮಾಕ್ರಾಟ್ಸ್ ಸಮಿತಿ ಪದಾಧಿಕಾರಿಗಳು,ಎಸ್‍ಡಿಪಿಐ ಮುಖಂಡರು,ವಿವಿಧ ಯುವ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡರು.