Home ಜಿಲ್ಲೆ ಬೆಂಗಳೂರು ಎಸ್‌ಐಆರ್ ನೋಂದಣಿಗೆ ಸಮಯಾವಕಾಶ ನೀಡುವಂತೆ ಡಿಸಿಗೆ ಆಗ್ರಹ

ಎಸ್‌ಐಆರ್ ನೋಂದಣಿಗೆ ಸಮಯಾವಕಾಶ ನೀಡುವಂತೆ ಡಿಸಿಗೆ ಆಗ್ರಹ

filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.053875; highlight: 1; algolist: 0; multi-frame: 1; brp_mask: 8; brp_del_th: 0.0043,0.0000; brp_del_sen: 0.1300,0.0000; delta:1; bokeh:1; ispap:1; papproctime: 2026:06:08 11:34:02; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 247.0;aec_lux_index: 0;albedo: ;confidence: ;motionLevel: 0;weatherinfo: null;temperature: 35;zeissColor: bright;

ಕೋಲಾರ:೯- ಎಸ್.ಐ.ಆರ್. ಸಂಬಂಧ ಜನರು ಮತದಾನದ ಹಕ್ಕು ಕಳೆದುಕೊಳ್ಳದಂತೆ ಸೂಕ್ತವಾದ ಕ್ರಮಗಳನ್ನು ವಹಿಸಿ ಸಮಯಾವಕಾಶ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ಜಿಲ್ಲೆಯ ಎಡ, ದಲಿತ, ಅಲ್ಪಸಂಖ್ಯಾತರ, ರೈತ, ಕಾರ್ಮಿಕ (ಜನಪರ ಸಂಘಟನೆಗಳು) ಸೋಮವಾರ ಮನವಿ ನೀಡಿ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಎಸ್‌ಐಆರ್ ಬಗ್ಗೆ ಸಂವಿಧಾನದ ಜನ ಪ್ರಾತಿನಿಧ್ಯ ಕಾಯ್ದೆಯ ಅನುಸಾರ ತೀವ್ರ ಪರಿಷ್ಕರಣೆ ಮಾಡಲು ಅವಕಾಶವಿದೆ. ಆದರೆ ಪ್ರಸ್ತುತ ವಿಶೇಷ ಎಂಬ ಪದ ಸೇರಿಸಿ ಈಗ ಮಾಡುತ್ತಿರುವ ಎಸ್.ಐ.ಆರ್. ಪ್ರಕ್ರಿಯೆಗಳು ಚುನಾವಣಾ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಒದಗಿಸಲಾಗದೆ ದೊಡ್ಡ ಸಂಖ್ಯೆಯಲ್ಲಿ ಅರ್ಹರಿದ್ದರೂ ಮತದಾರರ ಪಟ್ಟಿಯಿಂದ ಕೈ ಬಿಡಲ್ಪಟ್ಟಿದ್ದಾರೆ. ಇದನ್ನು ದೇಶದ ಜನರ ಮೇಲೆ ಹೇರಲಾಗಿದೆ.

ಒತ್ತಾಯ ಪೂರ್ವಕವಾಗಿ ಹೇರಲಾಗಿದ್ದು ಕೂಡಲೇ ಪರಿಪಡಿಸಬೇಕು ಎಂದು ಒತ್ತಾಯಿಸಿದರು
ಕರ್ನಾಟಕ ರಾಜ್ಯದಲ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಇರುವುದರಿಂದ ಎಸ್‌ಐಆರ್ ಮಾಡಲು ಇರುವ ಕಾಲಾವಕಾಶವನ್ನು ವಿಸ್ತರಣೆ ಮಾಡಬೇಕು, ತಾರ್ಕಿಕ ವ್ಯತ್ಯಾಸ ಲಾಜಿಕಲ್ ಡಿಸ್ತ್ರಿಪೆನ್ಸಿ ಯನ್ನು ಕರ್ನಾಟಕದಲ್ಲಿ ಆಳವಡಿಸಬಾರದು. ಹೆಸರುಗಳ ವ್ಯತ್ಯಾಸ ಸರ್ ನೇಮ್, ಇನಿಷಿಯಲ್‌ಗಳಲ್ಲಿನ ವ್ಯತ್ಯಾಸಗಳನ್ನು ಮತದಾರರ ತಪ್ಪೆಂದು ಪರಿಗಣಿಸಿ ನೋಟೀಸ್ ಕೊಡುವುದನ್ನು ಮಾಡಬಾರದು ಈಗಾಗಲೇ ಮ್ಯಾಪಿಂಗ್ – ಮ್ಯಾಚಿಂಗ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ಕೊಟ್ಟಿದ್ದು, ಜಿಲ್ಲೆಯ ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಆಗಿದೆ. ಆದ್ದರಿಂದ ಮ್ಯಾಪಿಂಗ್ – ಮ್ಯಾಚಿಂಗ್ ಮಾಡಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಸಂಪೂರ್ಣವಾಗಿ ಮ್ಯಾಪಿಂಗ್ – ಮ್ಯಾಚಿಂಗ್ ಮಾಡುವಂತೆ ಇನ್ನಷ್ಟು ಗಮನ ನೀಡಬೇಕು ಎಂದು ಮನವಿ ಮಾಡಿದರು


ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್ ಸೂರ್ಯನಾರಾಯಣ ಮಾತನಾಡಿ ಜನರಿಗೆ ಅನುಕೂಲವಾಗುವ ಹಾಗೆ ಗ್ರಾಮ ಪಂಚಾಯಿತಿ, ವಾರ್ಡುವಾರು ಪ್ರದೇಶಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆಯಬೇಕು ಮತದಾರರ ಚೀಟಿಯೂ ಒಳಗೊಂಡಂತೆ ಸಾಮಾನ್ಯವಾಗಿ ಜನರ ಬಳಿ ಇರಬಹುದಾದ ದಾಖಲೆಗಳನ್ನು ಒಪ್ಪದ ಚುನಾವಣಾ ಆಯೋಗ ಇಪ್ಪುತ್ತಿಲ್ಲ ಹಿಂದಿನ ಚುನಾವಣಾ ಗುರುತಿನ ಚೀಟಿ ಸೇರಿದಂತೆ ಸರ್ಕಾರದ ಸಕ್ಷಮ ಪ್ರಾಧಿಕಾರ ನೀಡುವ ಇತರ ಎಲ್ಲಾ ದಾಖಲೆಗಳನ್ನು ಪರಿಗಣಿಸಬೇಕು ಜಾತಿ ಪ್ರಮಾಣಪತ್ರ, ಖಾಯಂ ವಾಸ ದೃಢೀಕರಣ ಪತ್ರ, ವಂಶ ವೃಕ್ಷ, ಇತ್ಯಾದಿ ಅಗತ್ಯ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ ವಿಶೇಷ ಸಂದರ್ಭ ಎಂದು ಪರಿಗಣಿಸಿ ಕೂಡಲೇ ದಾಖಲೆಗಳನ್ನು ಪೂರೈಸಲು ವಿಶೇಷ ತಂಡಗಳನ್ನು ರಚನೆ ಮಾಡಬೇಕು ಎಂದು ಮನವಿ ಮಾಡಿದರು


ದಸಂಸ ರಾಜ್ಯ ಸಂಚಾಲಕ ಎನ್ ಮುನಿಸ್ವಾಮಿ ಮಾತನಾಡಿ ಎಸ್.ಐ.ಆರ್ ಗಾಗಿ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಇತರ ದಾಖಲೆ ಇಲ್ಲದಿರುವಾಗ ಅವರ ಅಥವಾ ಅವರ ತಂದೆ ಅಥವಾ ತಾಯಿಯ ಜನನ ಪ್ರಮಾಣ ಪತ್ರ ದಾಖಲೆಯನ್ನು ಮತದಾರರು ಸಲ್ಲಿಸಬೇಕಿರುವುದರಿಂದ, ಪ್ರಸ್ತುತ ವಕೀಲರ ಮೂಲಕ ನ್ಯಾಯಾಲಯಕ್ಕೆ ಹೋಗಿ ಆದೇಶ ಪ್ರತಿ ಪಡೆದು ಜನನ ಪ್ರಮಾಣ ಪತ್ರ ಪಡೆಯಬೇಕೆಂದು ಇರುವ ಪದ್ಧತಿಯನ್ನು ಎಸ್.ಐ.ಆರ್. ಗೆ ಅನ್ವಯಿಸಬಾರದು. ರಾಜ್ಯ ಸರ್ಕಾರದ ಜನನ ಮತ್ತು ಮರಣ ನೊಂದಣಿ ಇಲಾಖೆಯ ಸಕ್ಷಮ ಪ್ರಾಧಿಕಾರ ಅಥವಾ ತಹಶಿಲ್ದಾರ್ ರವರೇ ಅಂಥವರಿಗೆ ಜನನ ಪ್ರಮಾಣ ನೀಡಿ, ಮತದಾರರಿಗೆ ಆಗುವ ಅನಗತ್ಯ ವೆಚ್ಚ, ಸಮಯವನ್ನು ತಪ್ಪಿಸಬೇಕು.ಕರ್ನಾಟಕದಲ್ಲಿ ಸರ್ಕಾರದ ಪ್ರಕಾರವೇ ೩೦ ವರ್ಷದ ಹಿಂದೆ ೪೫% ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ಇದರಿಂದ ಸಹಜವಾಗಿ ತಾಯಿ ಮತ್ತು ಮಕ್ಕಳ ವಯಸ್ಸಿನ ಅಂತರ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ಅಂಥಹ ಮತದಾರರನ್ನ ಪಟ್ಟಿಯಿಂದ ಕೈ ಬಿಡಬಾರದು ಎಂದು ಮನವಿ ಮಾಡಿದರು


ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಿಐಟಿಯು ಎಂ.ವಿಜಯಕೃಷ್ಣ, ದಸಂಸ ಜಿಲ್ಲಾ ಸಂಚಾಲಕ ಸಿ.ವಿ.ಮುನಿವೆಂಕಟಪ್ಪ, ದಸಂಸ ಮುಖಂಡರಾದ ಹೂವರಸನಹಳ್ಳಿ ರಾಜಪ್ಪ, ದೇವರಾಜ್, ನರಸಿಂಹರಾಜು, ಮುನಿಯಪ್ಪ, ರೈತ ಸಂಘದ ಮುಖಂಡರಾದ ಗಂಗಮ್ಮ, ಎನ್ ಎನ್ ಶ್ರೀರಾಮ್, ವಿ.ನಾರಾಯಣರೆಡ್ಡಿ, ಸಿಂಗಪುರ್ ನಾರಾಯಣಸ್ವಾಮಿ, ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಸಾಧಿಕ್ ಅಹ್ಮದ್, ಶ್ರೀನಿವಾಸಪುರ ಪುರಸಭಾ ಸದಸ್ಯ ನರಸಿಂಹಮೂರ್ತಿ ಮುಂತಾದವರು ಇದ್ದರು.