
ಬೆಂಗಳೂರು, . ೨೫- ರಸ್ತೆಗಳ ವೈಟ್ ಟಾಪಿಂಗ್ ವೆಚ್ಚ ಮೂರು ಪಟ್ಟು ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ
ಕಮಿಷನ್ ಲೂಟಿಗೆ ಸಕ್ಖತ್ ಸ್ಕೆಚ್ಚು! ಹಾಕಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು
ಮಾರ್ಚ್ ತಿಂಗಳ ಬಜೆಟ್ನಲ್ಲಿ ಕಿ.ಮೀ.ಗೆ ಸರಾಸರಿ ೬.೬೬ ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡುತ್ತೇವೆ ಎಂದು ಬೊಗಳೆ ಬಿಟ್ಟಿದ್ದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಈಗ ೧೩೦.೮೫ ಕಿ.ಮೀ. ರಸ್ತೆಗೆ ೨,೩೨೧.೧೭ ಕೋಟಿ – ಅಂದರೆ ಕಿ.ಮೀ.ಗೆ ಸರಾಸರಿ ಬರೋಬ್ಬರಿ ೧೭.೭೪ ಕೋಟಿ ಖರ್ಚು ಮಾಡಲು ಸಚಿವ ಸಂಪುಟದಲ್ಲಿ ಸಮ್ಮತಿ ನೀಡಿರುವುದು ಹಗಲು ದರೋಡೆ ಎಂದು ಕಿಡಿ ಕಾರಿದ್ದಾರೆ
ಮುಖ್ಯಮಂತ್ರಿ ಶಿವಕುಮಾರ್ ಅವರು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕಮಿಷನ್ ಹಾಗೂ ಲೂಟಿಯ ಹುನ್ನಾರಕ್ಕಾಗಿಯೇ ವೆಚ್ಚವನ್ನು ಮೂರು ಪಟ್ಟು ಹಿಗ್ಗಿಸಿದ್ದಾರೆ.
ಕೇವಲ ೮೮ ರಸ್ತೆಗಳ ೧೩೦.೮೫ ಕಿ.ಮೀ.ಗೆ ೨,೩೨೧ ಕೋಟಿ ಸುರಿಯುತ್ತಿರುವುದನ್ನು ನೋಡಿದರೆ, ರಸ್ತೆಗಳ ಗುಣಮಟ್ಟಕ್ಕಿಂತ ’ಕಾಂಟ್ರ್ಯಾಕ್ಟರ್ಗಳ ಜೇಬು’ ತುಂಬಿಸುವುದೇ ಈ ಸರ್ಕಾರದ ಮುಖ್ಯ ಉದ್ದೇಶ ಎಂಬುದು ಸ್ಪಷ್ಟವಾಗಿದೆ. ಎಂದು ಟೀಕಿಸಿದ್ದಾರೆ
ಒಂದೆಡೆ ಬಡವರ, ಮಹಿಳೆಯರ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ “ಆರ್ಥಿಕವಾಗಿ ಶಕ್ತವಾಗಿಲ್ಲ” ಎಂದು ಸಬೂಬು ಹೇಳುವ ಈ ದಿವಾಳಿ ಸರ್ಕಾರಕ್ಕೆ, ಬೆಂಗಳೂರಿನ ರಸ್ತೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿಗಾಗಿ ಸ್ಕೆಚ್ಚು ಹಾಕಲು ಮಾತ್ರ ಹಣದ ಕೊರತೆಯಿಲ್ಲ!
ಬೆಂಗಳೂರಿನ ಜನರ ಶ್ರಮದ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರ ಈ ಭ್ರಷ್ಟ ನೀತಿಗೆ ಬೆಂಗಳೂರಿನ ಜನತೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ. ಈ ದುಬಾರಿ, ಶಂಕಾಸ್ಪದ ಯೋಜನೆಯನ್ನು ತಕ್ಷಣವೇ ಮರುಪರಿಶೀಲಿಸಿ, ಪಾರದರ್ಶಕತೆ ತರಬೇಕು ಎಂದು ಆಗ್ರಹಿಸಿದ್ದಾರೆ .






















