Home ಜಿಲ್ಲೆ ಕಲಬುರಗಿ ಜೂಜಾಟ: 13 ಜನರ ಬಂಧನ

ಜೂಜಾಟ: 13 ಜನರ ಬಂಧನ

ಕಲಬುರಗಿ,ನ.25-ನಗರದ ಹುಮನಾಬಾದ ರಿಂಗ್ ರಸ್ತೆ ಹತ್ತಿರವಿರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ, ಎಎಸ್‍ಐಗಳಾದ ನಾಗರಾಜ, ಭೀಮಾಶಂಕರ, ಸಿಬ್ಬಂದಿಗಳಾದ ಪುಂಡಲಿಕ, ಶ್ರೀಗಿರಿ, ಶಿವುಕುಮಾರ ಮತ್ತು ಕುಮಾರ ಅವರು ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ.
ದೇವಿಂದ್ರ ಬಡಿಗೇರ, ನಾಗರಾಜ ಹೀರಪ್ಪಗೋಳ, ಮಲ್ಲಿಕಾರ್ಜುನ ವಟಾರ್, ಯಲ್ಲಾಲಿಂಗ ಪೂಜಾರಿ, ಸಿದ್ದಪ್ಪ ಪೂಜಾರಿ, ಗೌರಿಶಂಕರ ಮಾಕ, ಶಂಕರ ಚಂಗಟಿ, ಉಮೇಶ ಗಿರೆಪ್ಪಗೋಳ, ಕರಣ್ ಕರಮಗಿ, ಭೀರಪ್ಪ ಮಾಲಿಪಾಟೀಲ, ವಿಶಾಲ ಪೂಜಾರಿ, ಭೀಮಾಶಂಕರ ಕುಸ್ತಿಗೌಡ ಮತ್ತು ಅಬ್ದುಲ್ ಖದೀರ್ ಖುರೇಶಿ ಅವರನ್ನು ಬಂಧಿಸಿ 13,230 ರೂ.ನಗದು ಮತ್ತು ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.