Home ಕ್ರೀಡೆ ಅಂತರ ವಿಶ್ವವಿದ್ಯಾಲಯ ತೋಳ್ಬಲ ಕುಸ್ತಿ ಚಾಂಪಿಯನ್‌ಶಿಪ್‌ -ಸೇಂಟ್ ಫ್ರಾನ್ಸಿಸ್ ಕಾಲೇಜಿನ ಎನ್. ಕಾವ್ಯಗೆ ಎರಡು ಪದಕಗಳ...

ಅಂತರ ವಿಶ್ವವಿದ್ಯಾಲಯ ತೋಳ್ಬಲ ಕುಸ್ತಿ ಚಾಂಪಿಯನ್‌ಶಿಪ್‌ -ಸೇಂಟ್ ಫ್ರಾನ್ಸಿಸ್ ಕಾಲೇಜಿನ ಎನ್. ಕಾವ್ಯಗೆ ಎರಡು ಪದಕಗಳ ಗರಿ!

ಬೆಂಗಳೂರಿನ ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಎನ್. ಕಾವ್ಯ ಅವರು ಉತ್ತರ ಪ್ರದೇಶದ ಮೀರತ್‌ನ ಸುಭಾರ್ತಿ ವಿಶ್ವವಿದ್ಯಾಲಯದಲ್ಲಿ 2026ರ ನವೆಂಬರ್ 17ರಿಂದ 20ರವರೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ತೋಳ್ಬಲ ಕುಸ್ತಿ (Arm Wrestling) ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಸೇಂಟ್ ಫ್ರಾನ್ಸಿಸ್ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ 90 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಕಾವ್ಯ ಅವರು ಬಲಗೈ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಎಡಗೈ ವಿಭಾಗದಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾವ್ಯ ಅವರ ಈ ಗಮನಾರ್ಹ ಸಾಧನೆಗೆ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.