
ನವದೆಹಲಿ, ನ.24: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರತೆಯನ್ನು ಹಿಂಪಡೆದ ನಿರ್ಧಾರದ ಹಿಂದೆ ನಿರ್ದಿಷ್ಟ ಉದ್ದೇಶವಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ತಂದೆಯ ಭದ್ರತೆಯನ್ನು ಹಿಂಪಡೆದಿದ್ದು ಆಕಸ್ಮಿಕ ನಿರ್ಧಾರವಲ್ಲ, ಅದರ ಹಿಂದೆ ಯಾರದ್ದೋ ಉದ್ದೇಶ ಅಡಗಿತ್ತು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥನ ಃeಟoಟಿgiಟಿg: ಂ ಎouಡಿಟಿeಥಿ oಜಿ ಐove ಪುಸ್ತಕದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸೋನಿಯಾ ಗಾಂಧಿ ಅವರೊಂದಿಗೆ ನಡೆಸಿದ ಸಂವಾದದ ವಿಡಿಯೋ ಜಾಲತಾಣಗಳಲ್ಲಿ ಗಮನಸೆಳೆದಿದೆ.
ಸಂವಾದದಲ್ಲಿ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರ ಭದ್ರತೆ ಹಿಂಪಡೆದಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದರು. ಈ ವೇಳೆ ತೆರೆದ ಜೀಪಿನಲ್ಲಿ ಸಂಚರಿಸುತ್ತಿದ್ದ ಅವರಿಗೆ ಕೆಲವು ಕಡೆ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳನ್ನು ಎದುರಿಸಬೇಕಾಗಿತ್ತು. ಆದರೆ ಅವರ ಭದ್ರತಾ ವ್ಯವಸ್ಥೆಯಲ್ಲಿ ನಿರೀಕ್ಷಿತ ಮಟ್ಟದ ಕಾಳಜಿ ವಹಿಸಲಾಗುತ್ತಿರಲಿಲ್ಲ ಎಂದು ಸೋನಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
ಭದ್ರತೆ ಮುಂದುವರಿಸುವಂತೆ ಸಮಿತಿಯೊಂದು ಶಿಫಾರಸು ಮಾಡಿದ್ದರೂ, ಹೊಸದಾಗಿ ಬೆದರಿಕೆ ಮೌಲ್ಯಮಾಪನ ನಡೆಸದೆ ವಿಶೇಷ ಭದ್ರತೆಯನ್ನು ಹಿಂಪಡೆದು ಸ್ಥಳೀಯ ಪೆÇಲೀಸರ ಭದ್ರತೆ ನೀಡಲಾಗಿತ್ತು ಎಂಬುದು ಅವರ ಆರೋಪ.
1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಯಾಗಿದ್ದರು.
500ಕ್ಕೂ ಹೆಚ್ಚು ಪುಟಗಳ ಪುಸ್ತಕದಲ್ಲೂ ಕೆಲವು ಸಂಗತಿಗಳಿಲ್ಲ!
ರಾಹುಲ್ ಗಾಂಧಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಸಂವಾದದ ವಿಡಿಯೋ ಹಂಚಿಕೊಂಡು, ತಾಯಿಯ ಪುಸ್ತಕದಲ್ಲಿ 500ಕ್ಕೂ ಹೆಚ್ಚು ಪುಟಗಳಿದ್ದರೂ ಕೆಲವು ಘಟನೆಗಳು ಇನ್ನೂ ಉಲ್ಲೇಖವಾಗಿಲ್ಲ ಎಂದು ಹೇಳಿದ್ದಾರೆ.2004ರಲ್ಲಿ ತೆಗೆದುಕೊಂಡ ನಿರ್ಧಾರ ಕೆಲವರಿಗೆ ನೆಮ್ಮದಿ ನೀಡಿದರೆ, ಇನ್ನು ಕೆಲವರಿಗೆ ಸಂತೋಷ ತಂದಿತ್ತು. ಅಪ್ಪನ ಭದ್ರತೆ ಹಿಂಪಡೆಯುವ ನಿರ್ಧಾರದ ಹಿಂದೆ ಒಂದು ಉದ್ದೇಶವಿತ್ತು ಎಂದು ರಾಹುಲ್ ಬರೆದಿದ್ದಾರೆ.
























