
ಕಲಬುರಗಿ: ಖಾಜಾ ಎಜುಕೇಶನ್ ಸೊಸೈಟಿಯ ‘ಕೆಬಿಎನ್ ಹೌಸ್ ಆಫ್ ಸ್ಪೋರ್ಟ್ಸ್’ ಆಯೋಜಿಸಿರುವ ‘ಖಾಜಾ ಬಂದಾನವಾಜ್ ಗೋಲ್ಡ್ ಕಪ್ 2026’ ಕ್ರೀಡಾಕೂಟದ ಕ್ರಿಕೆಟ್ ಮತ್ತು ಹಾಕಿ ಗೋಲ್ಡ್ ಕಪ್ ಟ್ರೋಫಿಗಳನ್ನು ದರ್ಗಾ ಹಜರತ್ ಖಾಜಾ ಬಂದಾನವಾಜ್ (ರಹ್) ಅವರ ಸಜ್ಜಾದಾ ನಶೀನ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು, ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಖಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ. ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಾಹೇಬ್ ಅವರು ಔಪಚಾರಿಕವಾಗಿ ಅನಾವರಣಗೊಳಿಸಿದರು.
ಆಟಗಾರರನ್ನು ಉದ್ಧೇಶಿಸಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಗೆಲುವು ಸೋಲು ಒಂದು ನಾಣ್ಯದ ಎರಡೂ ಮುಖವಿದ್ಧಾಂತೆ. ಅವುಗಳನ್ನು ಸಮನಾಗಿ ಕಾಣಬೇಕು. ಎಲ್ಲ ಆಟಗಾರರರಿಗೆ ಶುಭಾಶಯಗಳನ್ನು ಹೇಳಿದರು.
ಟಾಸನ ಮುಖ್ಯ ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ ಶಿವರಾಂಜನ ಸತ್ಯಂಪೇಟ್ ಇವರು ಖಾಜಾ ಶಿಕ್ಷಣ ಸಂಸ್ಥೆ ಈ ಭಾಗದಲ್ಲಿ ಒದಗಿಸುತ್ತಿರುವ ಶಿಕ್ಷಣ ಹಾಗೂ ಕ್ರೀಡಾ ಅವಕಾಶಗಳನ್ನು ಮುಕ್ತ ವಾಗಿ ಶ್ಲಾಘಿಸಿದರು. ದಿ. ಡಾ ಸಯ್ಯದ್ ಶಾಹ್ ಖುಸ್ರೋ ಸಾಹೇಬರು ಆರಂಭಿಸಿದ ಈ ಮಹಾತ್ಕಾರ್ಯವನ್ನು ಅವರ ಮಕ್ಕಳೆಲ್ಲರೂ ಇನ್ನೂ ಒಂದು ಹೆಜ್ಜೆ ಮುಂದೆ ಒಯುತ್ತಿರ್ಯವುದು ಸಂತೋಷ ಅಂದರು.
ನವೆಂಬರ್ 3 ರಿಂದ ಡಿಸೆಂಬರ್ 4 ರವರೆಗೆ ನಡೆಯಲಿರುವ ಕೆಬಿಎನ್ ಗೋಲ್ಡ್ ಕಪ್ 2026 ಕ್ರೀಡಾಕೂಟದಲ್ಲಿ ಫುಟ್ಬಾಲ್, ಕ್ರಿಕೆಟ್ ಮತ್ತು ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಫುಟ್ಬಾಲ್ ಪಂದ್ಯಾವಳಿಯು ಮುಕ್ತಾಯಗೊಂಡಿದ್ದು, ಪ್ರಸ್ತುತ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.
ಕ್ರಿಕೆಟ್ ಪಂದ್ಯಾವಳಿಯ 10ನೇ ದಿನದಂದು ನಡೆದ ಈ ಟ್ರೋಫಿ ಅನಾವರಣ ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಮಥ ವಾಣಿ ಪತ್ರಿಕೆಯ ಸಂಪಾದಕರು ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಡಾ. ಶಿವರಂಜನ್ ಸತ್ಯಂಪೇಟೆ, ಖಾಜಾ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ.ಎಂ. ಪಠಾಣ್, ಕೆಬಿಎನ್ ವಿಶ್ವವಿದ್ಯಾಲಯದ ಸಹ-ಕುಲಪತಿ ಪ್ರೊ. ಸೈಯದ್ ಅಶ್ಫಾಕ್ ಅಹ್ಮದ್, ಕುಲಸಚಿವ ಮೀರ್ ವಿಲಾಯತ್ ಅಲಿ, ಖಾಜಾ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಬೆನ್ನಿ ಕುರಿಯಾಕೋಸ್, ಎಂ. ಜೀಲಾನಿ, ಸೊಹೈಲ್ ಮುನ್ಶಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಟ್ರೋಫಿ ಅನಾವರಣ ಸಮಾರಂಭದ ಬಳಿಕ, 10ನೇ ದಿನದ ಪಂದ್ಯದಲ್ಲಿ ಸೆಣಸಾಡಿದ ಅಲ್-ಬರ್ಕಾತ್ ಶಾಲೆ ಮತ್ತು ಜಸ್ಟ್ ಕ್ರಿಕೆಟ್ ಅಕಾಡೆಮಿ ತಂಡಗಳ ಆಟಗಾರರನ್ನು ಗಣ್ಯರಿಗೆ ಪರಿಚಯಿಸಲಾಯಿತು. ನಂತರ ರಾಷ್ಟ್ರಗೀತೆಯನ್ನು ಹಾಡಲಾಯಿತು, ಬಳಿಕ ಟಾಸ್ ಪ್ರಕ್ರಿಯೆ. ಬಳಿಕ ಡಾ. ಶಿವರಂಜನ್ ಸತ್ಯಂಪೇಟೆ ಅವರು ನಾಣ್ಯ ಚಿಮ್ಮುವ (ಟಾಸ್) ಮೂಲಕ ಪಂದ್ಯಕ್ಕೆ ಅಧಿಕೃತ ಚಾಲನೆ ನೀಡಿದರು.



















