Home ಜಿಲ್ಲೆ ಬೆಂಗಳೂರು ದ್ರಾಕ್ಷಿ, ಮಾವು ಬೆಳೆಗೆ ವಿಮೆ ಮಾಡಿಸಲು ಸಲಹೆ

ದ್ರಾಕ್ಷಿ, ಮಾವು ಬೆಳೆಗೆ ವಿಮೆ ಮಾಡಿಸಲು ಸಲಹೆ

ದೇವನಹಳ್ಳಿ ಜೂ ೨೨– ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದ್ರಾಕ್ಷಿ ಮತ್ತು ಮಾವು ಬೆಳೆಯುವ ರೈತರು ತಮ್ಮ ಬೆಳಗಳಿಗೆ ವಿಮೆ(ಇನ್ಶುರೆನ್ಸ್) ಮಾಡಿಸಲು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗುಣವಂತ ತಿಳಿಸಿದ್ದಾರೆ.


ಮಾವು, ದ್ರಾಕ್ಷಿ ಬೆಳೆಯುವ ರೈತರು ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು ಬೆಳೆಗೆ ಪ್ರತಿ ಹೆಕ್ಟೇರಿಗೆ ೮೦,೦೦೦/- ವಿಮಾ ಮೊತ್ತ ಸಿಗಲಿದ್ದು, ರೈತರು ಶೇ ೫ ರಂತೆ ಹೆಕ್ಟೇರ್ ಗೆ ೪,೦೦೦/-, ಅಥವಾ ಒಂದು ಎಕರೆಗೆ ೧೬೦೦/- ರೂ ಮಾತ್ರ ವಿಮೆ(ಇನ್ಶುರೆನ್ಸ್) ಪಾವತಿ ಮಾಡಬೇಕು.


ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರಿಗೆ ೨,೮೦,೦೦೦ ರೂ ವಿಮಾ ಮೊತ್ತ ಸಿಗಲಿದ್ದು, ರೈತರು ಪ್ರತಿ ಹೆಕ್ಟೇರಿಗೆ ಶೇ. ೫ ರಂತೆ ೧೪,೦೦೦/- ಅಥವಾ ಎಕರೆಗೆ ೫೬೦೦/- ರೂ. ವಿಮೆ ಪಾವತಿ ಮಾಡಬೇಕು. ಪ್ರಕೃತಿ ವಿಕೋಪದಿಂದ ಬೆಳೆಗಳು ನಷ್ಟವಾದಗ ವಿಮಾ ಮೊತ್ತ ಸಹಾಯವಾಗಲಿದೆ.


ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಮತ್ತು ಬೆಳೆ ವಿಮಾ ಕಂತು ನೋಂದಾಯಿಸಿಕೊಳ್ಳಲು ಜುಲೈ ೩೧ ಕೊನೆಯ ದಿನವಾಗಿದೆ.


ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗದಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ/ಕಂದಾಯ ರಶೀದಿ/ಖಾತೆ ಪುಸ್ತಕ/ ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಕಾರ್ಡ್ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸುವುದು. ವಿಮೆ ಮಾಡಿಸುವ ರೈತರು FRUITS ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು, ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.


ಹೆಚ್ಚಿನ ಮಾಹಿತಿಗ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿ ದೇವನಹಳ್ಳಿ-೯೪೮೦೪೬೧೨೩೪, ದೊಡ್ಡ ಬಳ್ಳಾಪುರ-೯೪೮೨೧೨೯೬೪೮, ಹೊಸಕೋಟೆ-೯೮೮೦೨೧೦೮೯೨, ನೆಲಮಂಗಲ-೯೯೦೨೫೮೧೫೩೨ ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರ, ಹತ್ತಿರದ ಬ್ಯಾಂಕ್ ಶಾಖೆ ಹಾಗೂ ವಿಮಾ ಕಂಪನಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.