Home ಜಿಲ್ಲೆ ಕಲಬುರಗಿ ಯುವಸಂಗಮ ಪೋಸ್ಟರ್ ಬಿಡುಗಡೆ ಮಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಯುವಸಂಗಮ ಪೋಸ್ಟರ್ ಬಿಡುಗಡೆ ಮಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ,ಆ.27: ಕೇಂದ್ರದ ಶಿಕ್ಷಣ ಸಚಿವಾಲಯದ, ಉನ್ನತ ಶಿಕ್ಷಣ ಇಲಾಖೆಯ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಯೋಜನೆಯಡಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ಯುವಕರಿಗಾಗಿ ಆಯೋಜಿಸಲಾಗುವ ‘ಯುವ ಸಂಗಮ’ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮದ 7ನೇ ಹಂತದ ಪೆÇೀಸ್ಟರ್ ಅನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳು, ದೇಶದ ಯುವಜನತೆಯ ನಡುವೆ ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿ, ಹಾಗೂ ಪರಸ್ಪರ ತಿಳುವಳಿಕೆ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಜೋಡಿ ರಾಜ್ಯಗಳು ಮತ್ತು ಜೋಡಿ ಶಿಕ್ಷಣ ಸಂಸ್ಥೆಗಳ ನಡುವೆ ಆಯೋಜಿಸಲಾಗುವ ಪರಸ್ಪರ ಅಧ್ಯಯನ ಹಾಗೂ ಪರಿಚಯ ಭೇಟಿಗಳ ಮೂಲಕ “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಾರತದ ಮೂಲಭೂತ ಮೌಲ್ಯವನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದ ಐಐಟಿ, ಐಐಎಂ, ಕೇಂದ್ರೀಯ ವಿ.ವಿ.ಗಳು ಹಾಗೂ ಎನ್‍ಐಟಿ ಸೇರಿದಂತೆ ಒಟ್ಟು 20 ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಈ ಕಾರ್ಯಕ್ರಮದ ನೋಡಲ್ ಸಂಸ್ಥೆಗಳಾಗಿ ಗುರುತಿಸಲಾಗಿದೆ. ಆಯ್ಕೆಯಾದ ಯುವಕರು ಸುಮಾರು 5 ರಿಂದ 7 ದಿನಗಳ ಶೈಕ್ಷಣಿಕ ಪ್ರವಾಸ ಮಾಡಲಿವೆ. ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು, ಶಿಕ್ಷಣ ಸಂಸ್ಥೆಗಳು, ಆಡಳಿತ ವ್ಯವಸ್ಥೆ, ನವೋದ್ಯಮಗಳು, ಕೈಗಾರಿಕೆಗಳು, ಪರಿಸರ ವ್ಯವಸ್ಥೆಗಳು, ಐತಿಹಾಸಿಕ ಹಾಗೂ ಪರಂಪರೆಯ ತಾಣಗಳು ಮತ್ತು ಸಮುದಾಯ ಜೀವನವನ್ನು ಅಧ್ಯಯನ ಮಾಡಲಿದ್ದಾರೆ.
ಸಿಯುಕೆಯ ಜೋಡಿ ಸಂಸ್ಥೆಯಾಗಿ ಮಧ್ಯಪ್ರದೇಶದ ಭೋಪಾಲ್‍ನ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್ ಪಿ ಎ ) ಆಯ್ಕೆಯಾಗಿದೆ. ಶೀಘ್ರದಲ್ಲೇ ಎಸ್‍ಪಿಎ, ಭೋಪಾಲ್‍ನ ವಿದ್ಯಾರ್ಥಿಗಳ ತಂಡ ಕರ್ನಾಟಕಕ್ಕೆ ಹಾಗೂ ಸಿಯುಕೆಗೆ ಭೇಟಿ ನೀಡಲಿದ್ದು, ಇದೇ ರೀತಿಯಲ್ಲಿ ಸಿಯುಕೆಯ ವಿದ್ಯಾರ್ಥಿಗಳ ತಂಡ ಮಧ್ಯಪ್ರದೇಶಕ್ಕೆ ತೆರಳಲಿದೆ. ಅಲ್ಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದರು.
ಯುವ ಸಂಗಮ ಆನ್‍ಲೈನ್ ನೋಂದಣಿ ಇದೇ ಆಗಸ್ಟ್ 31, ಕೊನೆಯ ದಿನಾಂಕವಾಗಿದ್ದು, 18-30 ವರ್ಷದೊಳಗಿನ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಎನ್‍ಎಸ್‍ಎಸ್/ಎನ್‍ವೈಕೆಎಸ್ ಸ್ವಯಂಸೇವಕರು ಹಾಗೂ ಯುವ ವೃತ್ತಿಪರರು ಅಧಿಕೃತ ಯುವ ಸಂಗಮ ಪೆÇೀರ್ಟಲ್‍ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ಕಾರ್ಯಕ್ರಮ ಐದು ಪ್ರಮುಖ ವಿಷಂiÀiವಾಗಿದ್ದು, ಪರ್ಯಟನ (ಪ್ರವಾಸೋದ್ಯಮ), ಪರಂಪರಾ (ಸಂಪ್ರದಾಯ ಮತ್ತು ಸಂಸ್ಕೃತಿ), ಪ್ರಗತಿ (ಅಭಿವೃದ್ಧಿ ಮತ್ತು ಆಡಳಿತ), ಪರಸ್ಪರ ಸಂಪರ್ಕ (ಜನರಿಂದ ಜನರಿಗೆ ಸಂಪರ್ಕ) ಹಾಗೂ ಪ್ರದ್ಯೋಗಿಕಿ (ತಂತ್ರಜ್ಞಾನ ಮತ್ತು ನವೋದ್ಯಮ). ರಾಷ್ಟ್ರೀಯ ಶಿಕ್ಷಣ ನೀತಿ ಯ ಆಶಯಗಳಿಗೆ ಅನುಗುಣವಾಗಿ ಭಾರತದ ಸಾಂಸ್ಕೃತಿಕ, ಭಾಷಿಕ, ಶೈಕ್ಷಣಿಕ ಮತ್ತು ಅಭಿವೃದ್ಧಿಯ ವೈವಿಧ್ಯತೆಯನ್ನು ಆಳವಾಗಿ ಅರಿತುಕೊಳ್ಳಲಿದ್ದು, ಪರಸ್ಪರ ತಿಳುವಳಿಕೆ, ರಾಷ್ಟ್ರೀಯ ಏಕತೆ ಮತ್ತು ‘ಏಕ್ ಭಾರತ್-ಶ್ರೇಷ್ಠ ಭಾರತ್’ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಸಂಗಮ ಕಾರ್ಯಕ್ರಮ ಸಂಯೋಜಕ ಡಾ. ಜಗದೀಶ ಬಿರಾದಾರ್ ಹಾಗೂ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೋಟ ಸಾಯಿ ಕೃಷ್ಣ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಿಯುಕೆಯ ಯುವಸಂಗಮದ ನೋಡಲ್ ಅಧಿಕಾರಿ ಡಾ.ಶಿವ ಅವರನ್ನು ಸಂಪರ್ಕಿಸಬಹುದಾಗಿದೆ. ಮೊ : 9894297791,