
ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ,ಅಕ್ರಮ ಕಸಾಯಿಖಾನೆ,ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ,ಮರುಳುಗಾರಿಕೆ ಮತ್ತು ಜೂಜಾಟ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮಸೇನಾ ಜಿಲ್ಲಾಘಟಕದಿಂದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ,ರಾಮಸೇವಕ,ರಾಜು ವಾಘಮೋರೆ,ಪ್ರಶಾಂತ ಸೀರೂರ,ಉದಯ ಸುಲ್ತಾನಪುರ,ವೀರೇಶ ಬಿಂಗೆ,ಸಂಗು ಕಾಳಗನೂರ ಅವರು ಸೇರಿದಂತೆ ಹಲವರು ಪಾಲ್ಗೊಂಡರು.































