
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.27: ಜಿಲ್ಲೆಯ ಸಿರುಗುಪ್ಪ ನಗರದ ಹೈ ಸ್ಕೂಲ್ ಮೈದಾನ ಆವರಣ ಡಾ ಬಿ ಆರ್ ಅಂಬೇಡ್ಕರ್ ವಸತಿ ನಿಲಯದ ಬಯಲು ವೇದಿಕೆಯಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ ಕಲಾಸಂಘ ಕುಡದರಹಾಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರಾವಣ ಸಂಗೀತ ಕಾರ್ಯಕ್ರಮವನ್ನು ವಸತಿ ನಿಲಯದ ನಿಲಯ ಪಾಲಕ ಚಂದ್ರಶೇಖರ್ ಉದ್ಘಾಟಿಸಿದರು.
ನಂತರ ಮಾತನಾಡಿ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಪರಂಪರೆಯ ಸರ್ವಕಾಲಕ್ಕೂ ಜೀವಂತವಾಗಿದೆ.ಪವಿತ್ರ ಶ್ರಾವಣ ಮಾಸದಲ್ಲಿ ಶಿವನ ಭಕ್ತಿ, ಮಳೆಗಾಲದ ಸೌಂದರ್ಯ ಮತ್ತು ಪ್ರಕೃತಿಯ ಸೊಬಗನ್ನು ಆಚರಿಸಲು ನಮ್ಮ ಪೂರ್ವಜರು ಈ ಸಂಗೀತ ಕಛೇರಿಗಳನ್ನು ಹಿಂದಿನಿಂದಲೂ ಹಮ್ಮಿಕೊಳ್ಳುತ್ತ ಬಂದಿದೆ. ಸಂಗೀತ ಕೇಳುವುದರಿಂದ ಮನುಷ್ಯನ ಮನಸ್ಸಿಗೆ ನೆಮ್ಮದಿ ಶಾಂತಿ, ಏಕಾಗ್ರತೆ ಜೊತೆಗೆ ಮನುಷ್ಯನ ವ್ಯಕ್ತಿತ್ವದ ವಿಕಾಸನಕ್ಕೆ ಪೂರಕವಾಗಿದೆಂದು ಹೇಳಿದರು.
ಜನಪದ ಕಲಾವಿದ ದಳವಾಯಿ ಈರಣ್ಣ ಅಧ್ಯಕ್ಷತೆವಹಿಸಿದ್ದರು. ಸಂಗೀತ ಕಲಾವಿದ ದೊಡ್ಡ ಹುಸೇನಪ್ಪ, ತಿಮ್ಮಪ್ಪ ಬಿ. ಎಂ. ಸೂಗೂರು, ವೀರೇಶ್ ದಳವಾಯಿ, ಮಾರೇಶ ಮತ್ತು ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮದಲ್ಲಿ ಉಷಾ ಸಂಗನಕಲ್ಲು ಇವರಿಂದ ಜಾನಪದ ಸಂಗೀತ ಮತ್ತು ಸುಗಮ ಸಂಗೀತ ನಡೆಸಿಕೊಟ್ಟರು ಹಾರ್ಮೋನಿಯಂ ವಾದ್ಯದಲ್ಲಿ ಹುಸೇನಪ್ಪ ಹಲಿಗೆವಾದನ ವೀರೇಶ್ ಸಂಗೀತ ಕಾರ್ಯಕ್ರಮಕ್ಕೆ ಸಾತ್ ನೀಡಿದರು.































