
ಕಲಬುರಗಿ,ಆ.27:ಜಾಖರ್ಂಡ್ ರಾಜ್ಯದಿಂದ ಕಲಬುರಗಿಯ ಎನ್‍ಕೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ 46 ವರ್ಷದ ಅಜೀಮ್ ಮಿಯಾ ಅವರಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅಜೀಮ್ ಮಿಯಾ ಅವರು ಹೊಟ್ಟೆ ನೋವು, ಹಸಿವು ಕಡಿಮೆಯಾಗುವುದು ಹಾಗೂ ವಾಂತಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರು ಜಾಖರ್ಂಡ್‍ನಿಂದ ಕಲಬುರಗಿಯ ಎನ್‍ಕೆ ಆಸ್ಪತ್ರೆಗೆ ಆಗಮಿಸಿದ್ದು, ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳ ಮೂಲಕ ಅವರ ಹೊಟ್ಟೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು.
ಅಪ್ಪರ್ ಜಿಐ ಎಂಡೋಸ್ಕೋಪಿ ಹಾಗೂ ಬಯೋಪ್ಸಿ ಪರೀಕ್ಷೆಗಳ ನಂತರ, ಅವರಿಗೆ ಅಡೆನೋಕಾರ್ಸಿನೋಮಾ ಆಫ್ ಸ್ಟಮಕ್ (ಗ್ಯಾಸ್ಟ್ರಿಕ್ ಕ್ಯಾನ್ಸರ್) ಇರುವುದು ದೃಢಪಟ್ಟಿತು.
ರೋಗಿಯ ಆರೋಗ್ಯ ಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಗತ್ಯ ಸಿದ್ಧತೆಗಳ ನಂತರ, ಎನ್‍ಕೆ ಆಸ್ಪತ್ರೆಯ ಕನ್ಸಲ್ಟೆಂಟ್ ಗ್ಯಾಸ್ಟ್ರೋ ಸರ್ಜನ್ ಡಾ. ಆರಿಫ್ ರಝಾ ಅಹ್ಮದ್ ಅವರ ನೇತೃತ್ವದಲ್ಲಿ ಸಬ್‍ಟೋಟಲ್ ಗ್ಯಾಸ್ಟ್ರೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ರೋಗಿಯನ್ನು ಎನ್‍ಕೆ ಆಸ್ಪತ್ರೆಯ ಹೈ ಡಿಪೆಂಡೆನ್ಸಿ ಯುನಿಟ್ ನಲ್ಲಿ ವಿಶೇಷ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ವೈದ್ಯರು, ಶಸ್ತ್ರಚಿಕಿತ್ಸಾ ತಂಡ, ಅನಸ್ತೇಶಿಯಾ ತಂಡ, ಕ್ರಿಟಿಕಲ್ ಕೇರ್ ಹಾಗೂ ನರ್ಸಿಂಗ್
ಸಿಬ್ಬಂದಿಯ ನಿರಂತರ ಆರೈಕೆಯಿಂದ ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿತು.
ಕೆಲವು ದಿನಗಳ ನಂತರ ರೋಗಿಗೆ ಹಂತ ಹಂತವಾಗಿ ಆಹಾರವನ್ನು ಆರಂಭಿಸಲಾಯಿತು. ಆರೋಗ್ಯದಲ್ಲಿ ತೃಪ್ತಿಕರ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಅವರನ್ನು ವಾರ್ಡ್‍ಗೆ ಸ್ಥಳಾಂತರಿಸಲಾಯಿತು.ಪ್ರಸ್ತುತ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಅವರು ಉತ್ತಮ ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಾಖರ್ಂಡ್‍ನಂತಹ ದೂರದ ರಾಜ್ಯದಿಂದಲೂ ರೋಗಿಗಳು ಕಲಬುರಗಿಯ ಎನ್‍ಕೆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು, ಆಸ್ಪತ್ರೆಯಲ್ಲಿರುವ ನುರಿತ ತಜ್ಞ ವೈದ್ಯರು, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಮತ್ತು ಗುಣಮಟ್ಟದ ಆರೋಗ್ಯ ಸೇವೆಯ ಮೇಲಿನ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಎನ್‍ಕೆ ಆಸ್ಪತ್ರೆ ಸಂಕೀರ್ಣ ಶಸ್ತ್ರಚಿಕಿತ್ಸೆ ಮತ್ತು ಅತ್ಯಾಧುನಿಕ ವೈದ್ಯಕೀಯ ಸೇವೆಗಳಿಗೆ ವಿಶ್ವಾಸಾರ್ಹ ಕೇಂದ್ರ ಎನಿಸಿದೆ.































