
ಬೇಕಾಗುವ ಸಾಮಗ್ರಿಗಳು
*ಚಿಕನ್ 1/2
*ಈರುಳ್ಳಿ 2
*ಟೊಮೆಟೊ 2
*ಹಸಿರು ಮೆಣಸಿನಕಾಯಿ 4
*ಕಸೂರಿ ಮೇಥಿ 30
*ನಿಂಬೆರಸ 1 ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 ಚಮಚಸ
*ಕಾಳು ಮೆಣಸು 1 ಚಮಚ
*ಕೊತ್ತಂಬರಿ ಸೊಪ್ಪು – 1 ಕಟ್ಟು
*ಎಣ್ಣೆ 50 ಗ್ರಾಂ
*ಉಪ್ಪು – ರುಚಿಗೆ ತಕ್ಕಷ್ಟು
*ಕೊಬ್ಬರಿ ತುರಿ 1 ಚಮಚ
*ಲವಂಗ 5
*ಚಕ್ಕೆ 3 1 ಚಮಚ
- 3 ಪೀಸ್
*ಬೆಳ್ಳುಳ್ಳಿ 8 ಎಸಳು
ಮಾಡುವ ವಿಧಾನ :
ಕುಕ್ಕರ್‍ಗೆ ಎಣ್ಣೆ ಹಾಕಿ, ಕಾದ ಮೇಲೆ ಈರುಳ್ಳಿ, ಟೊಮೆಟೋ, ಅರಿಶಿಣ ಹಾಕಿ ಪ್ರೈ ಮಾಡಿ. ಇದಕ್ಕೆ ಚಿಕನ್ ಪೀಸ್ ಹಾಕಿ ಬೇಯಲು ಬಿಡಿ. ಲವಂಗ, ಚಕ್ಕೆ, ಬೆಳ್ಳುಳ್ಳಿ, ಹಸಿರು ಮೆಣಸಿನ ಕಾಯಿ, ಕಾಳುಮೆಣಸು, ಕೊಬ್ಬರಿ ತುರಿ, ಅಗತ್ಯವಿರುವಷ್ಟು ನೀರು ಸೇರಿಸಿ ರುಬ್ಬಿಕೊಂಡು, ಬೇಯುತ್ತಿರುವ ಕುಕ್ಕರಿಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಧನಿಯಾ ಪುಡಿ, ಉಪ್ಪು, ನೀರು ಹಾಕಿ ಬೇಯಲು ಬಿಡಿ. ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಕಸೂರಿ ಮೇಥಿ, ಗರಂ ಮಸಾಲ ಹಾಕಿ ಹುರಿದುಕೊಂಡು ಬೆಂದ ಚಿಕನ್ ಸೇರಿಸಿ. ಕೊನೆಯಲ್ಲಿ ನಿಂಬೆರಸ ಹಾಕಿದರೆ ಚಿಕನ್ ಚಾಪ್ಸ್ ಮಸಾಲ ಸವಿಯಲು ರೆಡಿ.




























