ಕಲಬುರಗಿ: ಪ್ರವಾದಿ ಜನ್ಮದಿನ ಈದ್ ಮಿಲಾದ್ ಪ್ರಯುಕ್ತ ನಿನ್ನೆ ನಗರದ ಮುಸ್ಲಿಂ ಚೌಕನಲ್ಲಿ ಹಮ್ಮಿಕೊಂಡಿದ್ದ 47ನೇ ಈದ್ ಮಿಲಾದನ ಭವ್ಯ ಮೆರವಣಿಗೆಗೆ ಗಣ್ಯಮಾನ್ಯರು ಜಂಟಿಯಾಗಿ ಚಾಲನೆ ನೀಡಿದರು, ಸಿರತ್ ಕಮೀಟಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಫರಾಜ್ ಉಲ್ ಇಸ್ಲಾಂ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಪೊಲೀಸ್ ಆಯುಕ್ತರಾದ ಶರಣಪ್ಪ ಎಸ್.ಡಿ, ಕುಡಾ ಅಧ್ಯಕ್ಷ ಮಜರ ಆಲಂ ಖಾನ್, ವಾಹಜ ಬಾಬಾ ಜುನೈದಿ, ಅಹಮರೂಲ್ ಇಸ್ಲಾಂ ಸೇರಿದಂತೆ ಧಾರ್ಮಿಕ ಮುಖಂಡರು, ಸಮಾಜ ಬಾಂಧವರು ಭಾಗವಹಿಸಿದ್ದರು.