Home ಜಿಲ್ಲೆ 30 ರಂದು ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ: ಭರತ ವಿ.ಜೆ

30 ರಂದು ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ: ಭರತ ವಿ.ಜೆ

ಬೀದರ್: ಇದೇ ತಿಂಗಳ ಆಗಸ್ಟ್ 30 ರಂದು ಸಾ. 7 ಗಂಟೆಗೆ ನಗರದ ಗಣೇಶ ಮೈದಾನದಲ್ಲಿ ಖೇಲ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲರೂ ಪೆÇ್ರೀತ್ಸಾಹಿಸಿ ಸಹಕರಿಸಬೇಕೆಂದು ‘ಖೇಲ್’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಭರತ ವಿ.ಜೆ. ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಂದು ನಡೆಯುವ ಸಮಾರಂಭದಲ್ಲಿ ಚಿತ್ರದ ಇಡೀ ತಂಡದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಚಿತ್ರದ ನಾಯಕ ನಟ ಯುವರಾಜ ಗೌಡ, ನಾಯಕಿ ನಟಿ ಆಶಿಕಾಗೌಡ, ವಿಶೇಷ ಪಾತ್ರದಲ್ಲಿ ನಟಿಸಿದ ನಟಿ ಸಂಗೀತಾ, ಚಿತ್ರದ ಸಂಗೀತ ನಿರ್ದೇಶಕ ತ್ಯಾಗರಾಜ್ ಎಸ್. ಸೇರಿದಂತೆ ಛಾಯಾಗ್ರಾಹಕರು ಹಾಗೂ ಇಡೀ ಚಿತ್ರತಂಡ ಬೀದರ ಜಿಲ್ಲೆಗೆ ಆಗಮಿಸುತ್ತಿದೆ. ಎಲ್ಲರೂ ಸಹಕರಿಸಿ ಪೆÇ್ರೀತ್ಸಾಹಿಸಬೇಕೆಂದು ಭರತ್ ಕೋರಿದರು.
ಖೇಲ್ ಎಂದರೆ ಪ್ರೀತಿಯ ಆಟ. ಜೆನ್ ಜೀ ಯುಗದ ಇಂದಿನ ಸಂದರ್ಭದಲ್ಲಿ ಅವರ ಜೀವನದಲ್ಲಿ ನಡೆಯುತ್ತಿರುವ ಪ್ರೀತಿಯ ಆಟಗಳು, ತಾಯಿ-ಮಕ್ಕಳ ಅನ್ಯೋನ್ಯತೆ, ಸ್ನೇಹ ಬಾಂಧವ್ಯ ಕುರಿತು ಈ ಚಿತ್ರದಲ್ಲಿ ತಿಳಿಸಿಕೊಡಲಾಗಿದೆ ಎಂದರು. ತಾಯಿಯ ಮಮತೆ ಕುರಿತು, ಪ್ರೀತಿ-ಪ್ರೇಮದ ಕುರಿತು ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ಚಿತ್ರವನ್ನು ಬೆಂಗಳೂರು, ಮೈಸೂರು ಮತ್ತು ಉತ್ತರಾಖಂಡ ರಾಜ್ಯದಲ್ಲಿ ಚಿತ್ರೀಕರಿಸಲಾಗಿದೆ. ಎರಡು ಗಂಟೆ ಐದು ನಿಮಿಷ ಅವಧಿಯ ಈ ಚಲನಚಿತ್ರವು ಸೆಪ್ಟೆಂಬರ್ 2026ರಲ್ಲಿ ರಾಜ್ಯದ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರಾದ ಸೂರ್ಯಕಾಂತ ಜೆಮಶೆಟ್ಟಿ, ಧನರಾಜ ಖಂಡ್ರೆ, ನಟ ಯುವರಾಜಗೌಡ ಉಪಸ್ಥಿತರಿದ್ದರು.