Home ಪಾಕವಿಧಾನ ಬ್ರೈನ್ ಪ್ರೈ

ಬ್ರೈನ್ ಪ್ರೈ

ಬೇಕಾಗುವ ಸಾಮಗ್ರಿಗಳು

  • ಬ್ರೈನ್ 1 ಕೆ.ಜಿ
    *ಎಣ್ಣೆ 200 2.
    *ತುಪ್ಪ 50 2.
    *ಶುಂಠಿ ಪೇಸ್ಟ್ -ಸ್ವಲ್ಪ
    *ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
    *ಈರುಳ್ಳಿ 2
    *ಟೊಮೆಟೊ 2
    *ಉಪ್ಪು ರುಚಿಗೆ ತಕ್ಕಷ್ಟು
    *ಹಸಿಮೆಣಸಿನಕಾಯಿ -6
    *ಕೊತ್ತಂಬರಿ ಸೊಪ್ಪು ಸ್ವಲ್ಪ
    *ಅರಿಶಿಣ ಪುಡಿ 1/4 ಚಮಚ
    *ಪೆಪ್ಪರ್ ಪೌಡರ್ -1 ಚಮಚ
    *ಗರಂ ಮಸಾಲ 1 ಚಮಚ
    ಮಾಡುವ ವಿಧಾನ :
    ಬ್ರೆನ್‍ನನ್ನು ನೀರಿನಲ್ಲಿ ಶುದ್ಧಕರಿಸಿಕೊಂಡು ಇಡ್ಲಿ ಕುಕ್ಕರ್‍ನಲ್ಲಿ ಬೇಯಿಸಿಕೊಂಡು ತಣ್ಣಗಾದ ನಂತರ ಕತ್ತರಿಸಿಕೊಳ್ಳಬೇಕು. ಅಗಲವಾದ ಬಾಯಿ ಇರುವ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ಎಣ್ಣೆ ಹಾಗೂ ತುಪ್ಪವನ್ನು ಸಣ್ಣ ಉರಿಯಲ್ಲಿ ಬಿಸಿಮಾಡಿಕೊಳ್ಳಿ. ಎಣ್ಣೆ ಕಾದ ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ನಂತರ ರುಬ್ಬಿಕೊಂಡ ಹಸಿರು ಮೆಣಸಿನಕಾಯಿ, ಟೊಮೆಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಪ್ರೈ ಮಾಡಿ. ನಂತರ ಅರಿಶಿಣ ಪುಡಿ, ಪೆಪ್ಪರ್ ಪೌಡರ್ ಹಾಗೂ ಗರಂ ಮಸಾಲ ಪೌಡರ್ ಹಾಕಿ ಪ್ರೈ ಮಾಡಿ. ಈ ಎಲ್ಲಾ ಮಸಾಲೆಗಳು ಪ್ರೈ ಆದ ನಂತರ ಬೇಯಿಸಿ ಕತ್ತರಿಸಿದ ಬ್ರೆನ್‍ನ್ನು ಹಾಕಿ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಪ್ರೈ ಮಾಡಿ ಕೆಳಗಿಳಿಸಿದರೆ ರುಚಿಯಾದ ಬ್ರೆನ್ ಪ್ರೈ ಸವಿಯಲು ತಯಾರಾಗಿರುತ್ತದೆ.