
ಚಿಕ್ಕಬಳ್ಳಾಪುರ.ಆ ೦೪: ನಮ್ಮ ದೇಶದ ಸಂಸ್ಕೃತಿ ಹಾಗೂ ನಮ್ಮ ಪರಂಪರೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದುದಾಗಿದ್ದು ನಮ್ಮ ಹಿರಿಯರನ್ನು ನಾವು ಗೌರವದಿಂದ ನಡೆಸಿಕೊಳ್ಳುವುದು ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಪಿ.ರಾಮಲಿಂಗೇಗೌಡ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಲ್ಲಿ ಜಿಲ್ಲಾಡಳಿತ ಜೀಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಾಧಿಕಾರ ವತಿಯಿಂದ ಏರ್ಪಡಿ ಸಿದ್ದ ಒಂದು ದಿನದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯ ಭವ್ಯತೆ ಹೇಗಿದೆ ಎಂದರೆ ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ ಎಂದು ನಾವು ಹೇಳುತ್ತೇವೆ ಹೇಳಿದ್ದನ್ನು ನಾವು ಪಾಲಿಸಿದಾಗ ಮಾತ್ರ ಅಂತಹ ಭವ್ಯ ಪದಗಳಿಗೆ ಅರ್ಥ ಬರುತ್ತದೆ.ಸಮಾಜದಲ್ಲಿ ಹಿರಿಯ ನಾಗರಿಕರು ಅವರು ಸಮಾಜಕ್ಕೆ ಬಾರ ಅಲ್ಲ ಅವರು ಸಮಾಜದ ಸ್ಥಿತಿಗೆ ಆಧಾರ ಎಂದರು.
ಉಪ ವಿಭಾಗಾಧಿಕಾರಿ ಆರ್ ಅಶ್ವಿನ್ ಮಾತನಾಡಿ,ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಕಾರ್ಯಗಳ ಕೋರ್ಟ್‌ಗಳಲ್ಲಿ ಇಂತಹ ಪ್ರಕರಣಗಳು ಆಗಾಗ ಬರುತ್ತಲೇ ಇರುತ್ತದೆ ಅಂತಹ ಸಂದರ್ಭದಲ್ಲಿ ನಾವು ಹಿರಿಯರ ಪರವಾಗಿ ಹಾಗೂ ನ್ಯಾಯ ಸಮ್ಮತವಾಗಿ ನ್ಯಾಯವನ್ನು ನೀಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಚಂದ್ರಯ್ಯ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಸಿವಿಹಿರಿಯ ಸಿವಿಲ್ ನ್ಯಾಯಾಧೀಶರು ಆದ ಶ್ರೀಮತಿ ಶಿಲ್ಪಾ ಬಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ ವಿ ಅಭಿಲಾಶ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ ,ಪಿಐ ರಮೇಶ್ ಬಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚೇತನ್ ಎಚ್ ಸಿ,ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಬಿ.ವಿ.ಕೃಷ್ಣ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜಯರಾಮ್ ರೆಡ್ಡಿ,ಕಾರ್ಯದರ್ಶಿ ತಿರುಮಲಪ್ಪ ಹಾಗೂ ಕಾನೂನು ಮತ್ತು ಪರೀಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಮೇಗೌಡ ಡಿಕೆ ಹಾಗೂ ಜಿಲ್ಲಾ ವಿಕಲಚೇತನರ ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿ ಶ್ರೀಮತಿ ಜ್ಯೋತಿ ಲಕ್ಷ್ಮಿ ಮತ್ತಿತರರು ಹಾಜರಿದ್ದರು


































