
ಕಲಬುರಗಿ,ಆ.26-ದಾನದಲ್ಲಿ ಶ್ರೇಷ್ಠವಾದ ದಾನ ನೇತ್ರದಾನ ಎಂದು ಜಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಕವಿತಾ ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ಜಿಮ್ಸ್ ಜಿಲ್ಲಾ ಆಸ್ಪತ್ರೆ ನೇತ್ರಾ ವಿಭಾಗದ ಸಹಯೋಗದಲ್ಲಿ ಜಿಮ್ಸ್ ಆಸ್ಪತ್ರೆಯ ಓಪಿಡಿ ವಿಭಾಗದ ಆವರಣದಲ್ಲಿ ಹಮ್ಮಿಕೊಂಡಿದ್ದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಏನಾದರು ಒಳ್ಳೆಯ ಕಾರ್ಯ ಮಾಡಬೇಕೆಂದರೆ ಅದು ನೇತ್ರಾದಾನ ಮಾತ್ರ. ಹುಟ್ಟುತ್ತ ಕುರುಡತ್ವದಲ್ಲಿ ಬೆಳೆದಿರುವವರ ಬಾಳಲ್ಲಿ ಬೆಳಕು ಆಗಬೇಕಾದರೆ ಮರಣದ ನಂತರ ನೇತ್ರಾದಾನ ಮಾಡುವುದರಿಂದ ಅಂಧತ್ವ ನಿವಾರಣೆ ಆಗುತ್ತದೆ. ಬದುಕು ಸಾರ್ಥಕವಾಗಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಮತ್ತು ಜಿಲ್ಲಾ ಅಂಧತ್ವ ಕಾರ್ಯಕ್ರಮ ಅಧಿಕಾರಿ ಡಾ.ರವಿಕಾಂತಿ ಕ್ಯಾತನಾಳ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ದಾನದಲ್ಲಿ ಶ್ರೇಷ್ಠ ದಾನ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೃಷ್ಟಿಗಾಗಿ ರೋಲ್ ಪ್ಲೇ ಮತ್ತು ಜನ ಜಾಗೃತಿ ಪ್ಲೇಕಾರ್ಡ್ ಪ್ರದರ್ಶಿಸಲಾಯಿತು. ಪರಂಗಣದಲ್ಲಿ ಹಾಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಓಪಿಡಿ ಸರ್ಜನ್ ಡಾ.ಶಾಲಿನಿ ಸಜ್ಜನಶೆಟ್ಟಿ, ನೇತ್ರ ವಿಭಾಗದ ವೈದ್ಯರುಗಳಾದ ಡಾ.ರಾಜೇಶ್ವರಿ ಮಹಾಂತಗೋಳ , ಡಾ.ಶೃತಿ ಬಾಡದ್, ಡಾ.ಜಬೇರ್, ಡಾ.ರಾಜಾಕ್, ಮೊಬೈಲ್ ಯೂನಿಟ್ ವೈದ್ಯರಾದ ಡಾ.ಶ್ರೀದೇವಿ, ನೇತ್ರಾಧಿಕಾರಿಗಳಾದ ವೀರಣ್ಣ ಎಸ್ ಕುಂಬಾರ, ಬಾಲಭೀಮ್ ಶಿರಸಗಿ , ಜಿಲ್ಲಾ ಸೈಕಾಲಜಿಸ್ಟ್ ಕೌನ್ಸಿಲರ್ ಮಂಜುನಾಥ್ ಕಂಬಾಳಿಮಠ ಮತ್ತು ಜಿಮ್ಸ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.































