
ಕೆ.ಆರ್.ಪುರ, ಆ.೨೬- ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಿದ್ದೇನೆ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.
ಕೆ.ಆರ್.ಪುರ ವಾರ್ಡನ ಟಿಸಿ ಪಾಳ್ಯದಲ್ಲಿ ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಗೌರಿಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆಗಳನ್ನು ವಿತರಣೆ ಮಾಡಿ ಮಾತನಾಡಿದರು.
ಉದ್ಯೋಗ,ಉಚಿತ ಟೈಲರಿಂಗ್,ಸೇರಿದಂತೆ ಕೌಶಲ್ಯ ಅಭಿವೃದ್ಧಿ ಸಂಬಂಧಿಸಿದಂತೆ ಹಲವು ಸಂಘಸಂಸ್ಥೆಗಳ ಮೂಲಕ ಮಹಿಳೆಯರ ಬೆಳವಣಿಗೆಗೆ ತಮ್ಮದೆ ಕೊಡುಗೆ ನೀಡಿದ್ದೆನೆ ಎಂದು ನುಡಿದರು.
ಗೌರಿಗಣೇಶ ಹಬ್ಬದ ಹಿನ್ನಲೆಯಲ್ಲಿ ಪ್ರತಿವರ್ಷ ಮಹಿಳೆಯರಿಗೆ ಬಾಗಿನ ನೀಡುತ್ತಾ ಬಂದಿದ್ದು,ಮಹಿಳೆಯರಿಗಾಗಿ ಕ್ಷೇತ್ರದಲ್ಲಿ ಸುರಕ್ಷತಾ ಹಾಗೂ ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದೆನೆ ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯ ಅಂತೋಣಿ ಸ್ವಾಮಿ ಅವರು ಮಾತನಾಡಿ ಕೆ.ಆರ್.ಪುರ ವಾರ್ಡನ ಹತ್ತು ಸಾವಿರ ಮಹಿಳೆಯರಿಗೆ ಸಿಉರೆಗಳನ್ನು ವಿತರಣೆ ಮಾಡಲಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಮುನೇಗೌಡ, ಎಂಪಿಎಂಸಿ ನಾಮನಿರ್ದೇಶಿತ ಮಾಜಿ ಸದಸ್ಯ ಭಟ್ಟರಹಳ್ಳಿ ಬಿ.ವಿ.ಮಂಜುನಾಥ,ವಾರ್ಡನ ಅಧ್ಯಕ್ಷರಾದ ಶಿವಪ್ಪ,ಯುವರಾಜ್,ಮಾಜಿ ಅಧ್ಯಕ್ಷ ರಮೇಶ್ ಗೌಡ,ಮುಖಂಡರಾದ ಕೆ.ಹೇಮಂತ್, ಡಿಸೇಲ್ ಮಂಜುನಾಥ, ಕಷ್ಣ,ರವಿ, ಜೆಸಿಬಿ ಅಂತೋಣಿ, ರಮೇಶ್, ಗಜೇಂದ್ರ ಮತ್ತಿತರರು ಇದ್ದರು.


































