
ಕಲಬುರಗಿ,ಆ.26-ಸಾಲಬಾಧೆ ತಾಳದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಳಂದ ತಾಲ್ಲೂಕಿನ ಕಣಮಸ ಗ್ರಾಮದಲ್ಲಿ ನಡೆದಿದೆ.
ಶಾಂತಯ್ಯ ತಂದೆ ಗುರುಪಾದಯ್ಯ ಮಠಪತಿ (65) ಆತ್ಮಹತ್ಯೆ ಮಾಡಿಕೊಂಡ ರೈತ.
ಮೃತ ರೈತನಿಗೆ ಆಳಂದ ತಾಲ್ಲೂಕಿನ ಕಣಮಸ ಗ್ರಾಮದಲ್ಲಿ 7 ಎಕರೆ 18 ಗುಂಟೆ ಜಮೀನಿದ್ದು, ಪತ್ನಿ ಮತ್ತು ನಾಲ್ವರು ಮಕ್ಕಳಿದ್ದಾರೆ. ಕೃಷಿ ಹಾಗೂ ಮಕ್ಕಳ ಮದುವೆಗಾಗಿ ತಡಕಲ್‍ನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಲ್ಲಿ 1 ಲಕ್ಷ, ಖಾಸಗಿಯಾಗಿ 5.50 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕಳೆದ 3-4 ವರ್ಷಗಳಿಂದ ಮಳೆ ಹೆಚ್ಚು ಕಡಿಮೆಯಾಗಿ ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆಯದ ಕಾರಣ ಸಾಲ ತೀರಿಸುವುದು ಹೇಗೆ ಎಂದು ಮಾನಸಿಕವಾಗಿ ನೊಂದುಕೊಂಡು ಮನೆಯ ಅಂಗಳದಲ್ಲಿರುವ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅವರ ಪತ್ನಿ ನಾಗಮ್ಮಾ ಮಠಪತಿ ಅವರು ದೂರು ಸಲ್ಲಿಸಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































