
ಕಲಬುರಗಿ,ಆ.26-ಖ್ಯಾತ ಛಾಯಾಗ್ರಾಹಕ ಡಾ ಎಂ.ಡಿ.ಮಿಣಜಗಿ ಅವರು ಕ್ಯಾಂಪೀನ ಪೆÇೀಟೋಗ್ರಾಫಿ ಎಕ್ಸಿಹಿಬಿಷ್ನನ್ ಸೊಸೈಟಿ ರೊಮೇನಿಯಾ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈಗ ಅವರಿಗೆ ಸೊಸೈಟಿವತಿಯಿಂದ ESCPE Excellence Service ಎಂಬ ಪ್ರಶಸ್ತಿ ದೊರಕಿದೆ.
ಡಾ.ಎಂ.ಡಿ ಮಿಣಜಗಿ ಅವರು ವೃತ್ತಿಯಲ್ಲಿ ವೈದರಾಗಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಛಾಯಾಚಿತ್ರ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವುದು ಶ್ಲಾಘನೀಯವಾಗಿದೆ ಎಂದು ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ ಜೋಶಿ ಅವರು ತಿಳಿಸಿದ್ದಾರೆ.































