
ಕೋಲಾರ,ಜು,೧೪- ತಾಲ್ಲೂಕಿನ ಸುಗಟೂರು ಹೋಬಳಿಯ ತೂರಾಂಡಹಳ್ಳಿ ಗ್ರಾಮದ ನಿರ್ಗತಿಕ ದಲಿತ ಕುಟುಂಬದವರು ಗೋಮಾಳದಲ್ಲಿ ಕೃಷಿ ಮಾಡಿ ಕೊಂಡು ಮನೆಗಳನ್ನು ನಿರ್ಮಿಸಿ ಕೊಂಡು ಕಳೆದ ೬೦-
೭೦ ವರ್ಷಗಳಿಂದ ವಾಸಿಸುತ್ತಿರುತ್ತಾರೆ ಅದರೆ ಗ್ರಾಮದ ನಾಚೇಗೌಡ ಎಂಬವರು ಸರ್ಕಾರಿ ತೋಟಗಾರಿಕೆ ಇಲಾಖೆಯ ವಿಶ್ವವಿದ್ಯಾಲಯದ ನೌಕರರಾಗಿದ್ದು ನಿವೃತ್ತಿಯ ನಂತರದಲ್ಲಿ ಗೋಮಾಳದಲ್ಲಿನ ಇವರುಗಳ ಮನೆಗಳಿಗೆ ದಾರಿ ಬಿಡದಂತೆ ಒತ್ತುವರಿ ಮಾಡಿ ಕೊಂಡಿರುವುದನ್ನು ತೆರವು ಮಾಡಿಸಿ, ಅಕ್ರಮವಾಗಿ ಭೂ ಮಂಜೂರು ಮಾಡಿಸಿ ಕೊಂಡಿರುವುದನ್ನು ರದ್ದುಪಡಿಸಬೇಕು. ಜಿಲ್ಲಾಧಿಕಾರಿಗಳನ್ನು ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಾಚೇಗೌಡರ ಕುಟುಂಬದಲ್ಲಿ ೨೬ ಮಂದಿ ಇರುವಂತ ಕೊಡುಕುಟುಂಬವಾಗಿದೆ. ಇವರ ಕುಟುಂಬದವರಿಗೆ ಸುಮಾರು ೪೮ ಎಕರೆ ಜಮೀನು ಹೊಂದಿದ್ದಾರೆ. ಇವರುಗಳು ಬಡ ಕೃಷಿಕರೆಗೆ ವಿತರಿಸುವಂತ ಸೌಲಭ್ಯಗಳನ್ನು ಕಾನೂನು ಬಾಹಿರವಾಗಿ ಪಡೆದು ಕೊಂಡಿದ್ದಾರೆ. ಗೋಮಾಳದಲ್ಲಿ ದಲಿತರು ಇರುವ ಮನೆಗಳ ಜಮೀನಿನಲ್ಲಿ ತಮ್ಮ ಜಮೀನಿಗೆ ದಾರಿ ಬೇಕೆಂದು ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿ ಕೊಂಡಿದ್ದಾರೆ. ದಲಿತರಿಗೆ ನೀಡಲಾಗಿದ್ದ ಸಾಗುವಳಿ ಚೀಟಿಗಳನ್ನು ರದ್ದು ಪಡೆಸಿ ಸರ್ಕಾರದ ಗೋಮಾಳ ಜಮೀನು ಉಳಿಸ ಬೇಕೆಂದು ಒತ್ತಾಯಿಸಿದರು.
ಕಾನೂನು ಬಾಹಿರವಾಗಿ ಗೋಮಾಳ ಜಮೀನು ಮಂಜೂರು ಮಾಡಿಸಿ ಕೊಂಡಿರುವ ವಿರುದ್ದ ಸುಮಟೊ ಪ್ರಕರಣವನ್ನು ದಾಖಲು ಮಾಡ ಬೇಕು. ಒಂದು ಕುಟುಂಬಕ್ಕೆ ೪.೫ ಹೆಕ್ಟರ್ಗಿಂತ ಹೆಚ್ಚಿನ ಜಮೀನು ಇದ್ದವರಿಗೆ ಸರ್ಕಾರಿ ಜಮೀನು ಮಂಜೂರು ಮಾಡುವಂತಿಲ್ಲ ನಾಚೇಗೌಡ ಕುಟುಂಬದವರಿಗೆ ಸುಮಾರು ೪೫ ಎಕರೆ ಇದ್ದರೂ ಸಹ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕರಿಗಾಗಿ ಇರುವಂತ ಅಶ್ವಥಕಟ್ಟೆ, ಕಲ್ಯಾಣಿಗಳನ್ನು ಸಹ ಬಿಡದಂತೆ ಒತ್ತುವರಿ ಮಾಡಿರುವುದನ್ನು ಕೊಡಲೇ ತೆರವು ಗೊಳಿಸ ಬೇಕು. ದಲಿತರಾದ ನಾರಾಯಣಸ್ವಾಮಿ ಮತ್ತು ನಾರೆಪ್ಪ ಎಂಬುವರು ಕಳೆದ ೭೦ ವರ್ಷಗಳಿಂದ ಅನುಭವದಲ್ಲಿರುವ ಜಮೀನಿನ ಮೇಲೆ ವೆಂಕಟೇಶ್ಗೌಡ ಎಂಬುವರು ಸಾಲ ಪಡೆದಿರುವರು.ಇಷ್ಟೆ ಅಲ್ಲದೆ ನಾಚೆಗೌಡರ ಕುಟುಂಬದವರು ಶ್ರೀನಿವಾಸಪುರ ತಾಲ್ಲೂಕಿನ ಬಂಗೂದಿ ಗ್ರಾಮದಲ್ಲಿ ಕಂದಾಯ ಅಧಿಕಾರಿಗಳ ದಾರಿ ತಪ್ಪಿಸಿ ೧೦ ಎಕರೆ ಜಮೀನು ಮಂಜೂರು ಮಾಡಿಸಿ ಕೊಂಡಿದ್ದಾರೆಂದು ದೂರಿ ಇದನ್ನು ಸಹ ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳ ಬೇಕೆಂದು ಅಗ್ರಹ ಪಡೆಸಿದರು.
ಪ್ರಶ್ನೆಯೊಂದಕ್ಕೆ ಅಧಿಕಾರಿಗಳು ಅರ್ಜಿಗಳನ್ನು ಜಾಗೃತಿಯಿಂದ ಪರಿಶೀಲಿಸ ಬೇಕು. ಗ್ರಾಮದಲ್ಲಿನ ವಿಲೇಜ್ ಅಕೌಂಟೆಂಟ್ ಹಾಗೂ ಕಂದಾಯ ನಿರೀಕ್ಷಕರು ನೀಡುವ ವರದಿಗಳನ್ನು ಪರಿಶೀಲಿಸದೆ ತಹಸೀಲ್ದಾರ್, ಸಹಾಯಕ ಕಮೀಷನರ್ ಹಾಗೂ ಜಿಲ್ಲಾಧಿಕಾರಿಗಳು ಮಂಜೂರಾತಿ ವಿರುದ್ದದ ಮೇಲ್ಮನವಿಗಳನ್ನು ಪರಿಶೀಲಿಸದೆ ತಿರಸ್ಕರಿಸಿ ರದ್ದು ಪಡೆಸಿರುವುದು ಸಮಂಜಸವಲ್ಲ ಎಂದು ಪ್ರತಿಪಾದಿಸಿದರು.
ಈ ರೀತಿ ನಿರ್ಲಕ್ಷತೆ ವಹಿಸಿದರೆ ದಲಿತರಾದ ಬಂಗಾವದಿ, ಮುನಿವೆಂಕಟಪ್ಪ ಅವರುಗಳು ಬದುಕುವುದಾದರೂ ಹೇಗೆಂದು ಪ್ರಶ್ನಿಸಿದ ಅವರು ಸರ್ಕಾರಿ ಗೋಮಾಳ ಜಮೀನುಗಳನ್ನು ಉಳಿಸಿ ಬೇಕು. ಸರ್ವೆ ನಂಬರ್ ೭೦ ಮತ್ತು ೮೦ರಲ್ಲಿ ಮಂಜೂರು ಮಾಡಿರುವ ಜಮೀನುಗಳನ್ನು ಮುಟ್ಟುಗೋಲು ಹಾಕಿ ಕೊಳ್ಳ ಬೇಕು. ಇದರಿಂದ ಸುಮಾರು ೨೫ ಎಕರೆ ಜಮೀನು ಸರ್ಕಾರಕ್ಕೆ ಉಳಿಯುವಂತಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್, ಶಿವಪ್ಪ, ಆರ್.ಕೆಂಚಪ್ಪ, ಸಾಮ್ರಾಟ್ ಕೃಷ್ಣಮೂರ್ತಿ, ಅಜೀಂಪಾಷ, ರಾಮಚಂದ್ರಪ್ಪ, ನಾರಾಯಣಸ್ವಾಮಿ, ಮುನಿಯಪ್ಪ. ಶಮರಪ್ಪ. ಗೋಪಾಲಪ್ಪ, ಮುನಿಶಾಮಪ್ಪ, ವೆಂಕಟೇಶಪ್ಪ ಉಪಸ್ಥಿತರಿದ್ದರು.


































