Home ಜಿಲ್ಲೆ ಬೆಂಗಳೂರು ಪುರಸಭಾ ಅಧಿಕಾರಿಗಳು ಗಣಪತಿ ಮೂರ್ತಿ ಪರಿಶೀಲನೆ

ಪುರಸಭಾ ಅಧಿಕಾರಿಗಳು ಗಣಪತಿ ಮೂರ್ತಿ ಪರಿಶೀಲನೆ

ವಿಜಯಪುರ.ಆ.೨೮- ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಮಾಡುವುದನ್ನು ಸರಕಾರ ಸಂಪೂರ್ಣ ನಿಷೇಧಿಸಿದ್ದು,ಇದಕ್ಕೆ ಗಣೇಶ ಮೂರ್ತಿ ತಯಾರಕರು ಸಹಕಾರ ನೀಡಬೇಕೆಂದು ಎಂದು ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್ ತಿಳಿಸಿದರು.


ಪಟ್ಟಣದ ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿರುವ ಎಸ್.ಎಲ್.ವಿ.ಗಣಪತಿ ಗೋದಾಮಿಗೆ ಬೇಟಿ ನೀಡಿ ಗಣಪತಿ ಮೂರ್ತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮೇಲಧಿಕಾರಿಗಳ ಆದೇಶದಂತೆ ಎಲ್ಲ ಮೂರ್ತಿ ತಯಾರಿಕರಿಗೆ ಕಡ್ಡಾಯವಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಲು ನೋಟಿಸ್ ಜಾರಿ ಮಾಡಲಾಗಿದೆ.ಗ್ರಾಹಕರು ಗಣೇಶ ಮೂರ್ತಿಗಳ ಬೇಡಿಕೆಗೆ ಅನುಗುಣವಾಗಿ ಈ ವರ್ಷ ಗಣೇಶ ಹಬ್ಬಕ್ಕೆ ಕಡ್ಡಾಯವಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾಡುವುದರ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು.ಇಷ್ಟಕ್ಕೂ ಮೀರಿ ಯಾರಾದರೂ ಪಿಒಪಿ ಗಣಪತಿ ಮೂರ್ತಿ ತಯಾರಿಸಿ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಹೇಳಿದರು.


ಪುರಸಭಾ ಪರಿಸರ ಅಭಿಯಂತರ ಶೇಕರ್ ರಡ್ಡಿ ಮಾತನಾಡಿ,ಪ್ರತಿವರ್ಷದಂತೆ ಈ ವರ್ಷವು ಗಣೇಶ ಹಬ್ಬಕ್ಕೆ ಕಡ್ಡಾಯವಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾಡುವುದರ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಇಷ್ಟಕ್ಕೂ ಮೀರಿ ಯಾರಾದರೂ ಪಿಒಪಿ ಗಣಪತಿ ಮೂರ್ತಿ ತಯಾರಿಸಿ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಹೇಳಿದರು.


ಮೂರ್ತಿ ತಯಾರಕ ಜಿ.ರಾಜಗೋಪಾಲ್ ಮಾತಣಾಡಿ, ಸುಮಾರು ೪೫ ವರ್ಷಗಳಿಂದ ನಮ್ಮ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮಣ್ಣಿನ ಗಣಪತಿ ತಯಾರಿಕೆ ಮಾಡಿಕೊಂಡು ಬರುತ್ತಿದ್ದೇವೆ,ನಾವು ಮಣ್ಣಿನ ಗಣಪತಿ ಮೂರ್ತಿಗಳನ್ನು ಆಂಧ್ರ ಪ್ರದೇಶ, ತಮಿಳುನಾಡು, ಮೈಸೂರು, ಬೆಂಗಳೂರು ಹಾಗೂ ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಿಗೂ ಪರಿಸರ ಸ್ನೇಹಿ ಗಣಪತಿಯನ್ನು ಹೋಲ್ ಸೇಲ್ ದರದಲ್ಲಿ ನೀಡುತ್ತಿದ್ದೇವೆ ಎಂದರು.


ಈ ಸಂದರ್ಭದಲ್ಲಿ ಪುರಸಭಾ ಆರೋಗ್ಯ ಅಧಿಕಾರ ಲಾವಣ್ಯ, ಪೃಥ್ವಿ ಪುರಸಭಾ ಸಿಬ್ಬಂದಿಗಳು ಹಾಗೂ ತಯಾರಕರಾದ ವರುಣ್, ಗಗನ್ ಕಾರ್ಮಿಕರು ಹಾಜರಿದ್ದರು.