
ಬೆಂಗಳೂರು, ನ. ೧೬- ಶಾಲೆಯೊಂದರಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಮಕ್ಕಳ ಮುಂದೆ ’ಕಾಂಗ್ರೆಸ್ ದರಿದ್ರ ಪಕ್ಷ ಎಂದು ಮಾತನಾಡಿದ್ದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಲಾ ಆವರಣದಲ್ಲಿ ರಾಜಕೀಯ ಪ್ರಚಾರ ಸಲ್ಲದು ಎಂದಿರುವ “ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಪೂಂಜಾ ಅವರಿಗೆ ಎಲ್ಲಿ ಏನು ಮಾತನಾಡಬೇಕೆಂಬ ಪರಿಜ್ಞಾನವಿಲ್ಲ. ಎಂದು ವಾಗ್ದಾಳಿ ನಡೆಸಿದ್ದಾರೆ ಶಾಲೆಯಲ್ಲಿ ಮಕ್ಕಳಿಗೆ ಸೂಕ್ತವಾದ ಪಾಠ ಮಾತ್ರ ನಡೆಯಬೇಕು” ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಅವರು, ಈಗಾಗಲೇ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿದರು.”ಕ್ಷಮೆ ಕೇಳಿದರೂ ಕಾನೂನು ಕ್ರಮದಿಂದ ಹಿಂದೆ ಸರೆಯುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ರಾಮನಗರದ ದೇವಸ್ಥಾನವೊಂದರಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರವೇಶ ನಿರಾಕರಿಸಿದ ವಿಚಾರದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಪ್ರತಿಕ್ರಿಯಿಸಿ “ಈ ವಿಚಾರದ ಸಂಪೂರ್ಣ ಮಾಹಿತಿ ನನಗಿಲ್ಲ. ಯಾರು ಬೀಗ ಹಾಕಿಸುತ್ತಾರೆ ಪೊಲೀಸರು ಅವರೊಟ್ಟಿಗೆ ಇರಬೇಕಾದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡದ ವಿಚಾರಗಳಿವೆ. ಈ ಬಗ್ಗೆ ಯಾರೂ ಮಾತನಾಡಲ್ಲ ಆದರೆ ನಿಖಿಲ್ ಕುಮಾರಸ್ವಾಮಿ ಅವರದೇ ದೊಡ್ಡ ಸುದ್ದಿಯಾಗುತ್ತಿದೆ ಈ ಘಟನೆ ಉದ್ದೇಶಪೂರ್ವಕವಾಗಿದ್ದರೆ ತಪ್ಪು, ಆದರೆ ಇದನ್ನು ದೊಡ್ಡ ಸುದ್ದಿ ಮಾಡಬೇಕಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೂರು ದಾಖಲಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಪುಸ್ತಕ ಬಿಡುಗಡೆ ಮತ್ತು ವಾಚನ ಕಾರ್ಯಕ್ರಮಕ್ಕೆ ಎಲ್ಲ ಮುಖ್ಯಮಂತ್ರಿಗಳು ಮತ್ತು ಪಕ್ಷದ ನಾಯಕರು ಹಾಜರಾಗುತ್ತಿದ್ದಾರೆ.
ಈ ಪ್ರವಾಸದಲ್ಲಿ ಸಚಿವ ಸ್ಥಾನ ಭರ್ತಿ ಸೇರಿದಂತೆ ರಾಜಕೀಯ ಚರ್ಚೆಗಳು ನಡೆಯುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ, “ಅಧಿವೇಶನಕ್ಕೂ ಮುನ್ನ ಏನಾದರೂ ನಿರ್ಧಾರವಾಗಬಹುದು. ಆದರೆ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ಆದ್ಯತೆಯಾಗಿದೆ. ನನಗೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಉತ್ತರಿಸಿದರು























