
ಯಾದಗಿರಿ: ಎಂ.ಹೊಸಳ್ಳಿ ಗ್ರಾಮದ ಗಿರಿನಗರದ ಸಂಗೀತವೇ ಸಾಮ್ರಾಜ್ಯ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ “ಸಾಂಸ್ಕೃತಿಕ ಗಡಿಜಿಲ್ಲೆಯ ಜಾನಪದ ಸಂಸ್ಕೃತಿ ಉಳಿಸಿ” ಜಾನಪದ ಸಂಗೀತ ಕಾರ್ಯಕ್ರಮ ಹೊನಗೇರಾ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಜರುಗಿತು.
ಶ್ರೀಮತಿ ಯಲ್ಲಮ್ಮ ತುಳಜಾಪೂರ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುÄಖ್ಯ ಅತಿಥಿಗಳಾಗಿ ನಾಗಪ್ಪ ಘಂಟಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಮಲ್ಲಪ್ಪ ಮೇದ,
ಸಾಬಣ್ಣ ಬಂಗನೂರು, ಹಣಮಂತ ಆಶನಾಳ, ದೇವಪ್ಪ, ಸಾಬಣ್ಣ ಮೇಲ್ಮನಿ, ದೇವಿಂದ್ರಪ್ಪ, ಸಂಗೀತವೇ ಸಾಮ್ರಾಜ್ಯ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಎಂ. ಹೊಸಳ್ಳಿ ಇದ್ದರು.
ನಂತರ ಜರುಗಿದ ಕಾರ್ಯಕ್ರಮದಲ್ಲಿ ಕಲಾವಿದರ ತಂಡಗಳಾದ ಶಂಕರ ಶಾಸ್ತ್ರೀ ಯಾದಗಿರಿ (ಭಾವಗೀತೆ), ಗಂಗಮ್ಮ ಯಾದಗಿರಿ (ಜಾನಪದ ಗೀತೆ), ಮಹಾದೇವ (ತತ್ವಪದ),ತಿರುಪತಿ ವೈದ್ಯ (ವಚನ ಗಾಯನ), ಭಾಗಣ್ಣ ಗೋಪಾಳಿ (ಹರ‍್ಮೋನಿಯಂ) ತಂಡಗಳಿAದ ಸಂಗೀತ ಕಾರ್ಯಕ್ರಮ ಜರುಗಿತು. ತಬಲಾ ಸಾಥಿಯನ್ನು ಬಸವರಾಜ ಚಿಗರಳ್ಳಿ ನೀಡಿದರು.
































