
ಆನೇಕಲ್.ಆ.೨೯-ಹೆಬ್ಬಗೋಡಿ ನಗರ ಸಭೆ ವ್ಯಾಪ್ತಿಯ ಅನಂತನಗರದಲ್ಲಿರುವ ಪ್ರಜಾಪಿತ ಬ್ರಹ್ಮ ಕುಮಾರೀಸ್ ಅಖಂಡ ಜ್ಯೋತಿ ಭವನ್ ಆವರಣದಲ್ಲಿ ರಕ್ಷಾ ಬಂದನ ಮತ್ತು ಕೃಷ್ಣಾ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.
ಈ ವೇಳೆ ಪ್ರಜಾ ಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಅನಂತನಗರ ಶಾಖೆಯ ಮುಖ್ಯಸ್ಥರಾದ ಬಿ.ಕೆ.ಅಮೃತ ಅಕ್ಕ ರವರು ಮಾತನಾಡಿ ರಕ್ಷಾ ಬಂದನ ಎಂದರೆ ಎಲ್ಲರಿಗೂ ಪರಮಾತ್ಮನಿಂದ ರಕ್ಷಣೆ ಬೇಕು ಹಾಗೂ ಶ್ರೀ ರಕ್ಷೆ ಎಂದರೆ ಮನುಷ್ಯ ಮನುಷ್ಯರನ್ನು ಯಾರು ರಕ್ಷಣೆ ಮಾಡುವುದಕ್ಕೆ ಆಗಲ್ಲ.ನಮ್ಮೆಲ್ಲರನ್ನು ರಕ್ಷಣೆ ಮಾಡುವನು ಶಿವ ಆಗಿದ್ದಾರೆ ಎಂದರು.ಇನ್ನು ಕೃಷ್ಣಾ ಜನ್ಮಾಷ್ಠಮಿಯನ್ನು ನಾವೆಲ್ಲರೂ ಸಹ ತುಂಬ ಪ್ರೀತಿಯಿಂದ. ಭಕ್ತಿ ಬಾವದಿಂದ ಪೂಜೆ ಮಾಡುತ್ತೇವೆ. ಕೃಷ್ಣ ನಂತಹ ಮಗ ಹುಟ್ಟಲಿ. ಕೃಷ್ಣನಂತಹ ಪತಿ ಸಿಗಲಿ. ಕೃಷ್ಣ ಅಂದರೆ ಕೃಷ್ಣನಲ್ಲಿರುವ ಗುಣಗಳು ನಮ್ಮಲ್ಲಿ ಬರಬೇಕು. ಕೃಷ್ಣ ಎಂದರೆ ಮರ್ಯಾದ ಪುರುಷೋತ್ತಮ ಮತ್ತು ಗುಣಮೂರ್ತಿಯಾಗಿದ್ದು ಆ ಗುಣಗಳು ನಮ್ಮಲ್ಲಿ ಬರಲಿ ಎಂಬ ಉದ್ದೇಶದಿಂದ ಕೃಷ್ಣಾ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತದೆ ಎಂದರು.
ಈ ಒಂದು ಸಂಗಮ ಯುಗದಲ್ಲಿ ಪರಮಾತ್ಮ ನಿಂದ ಜ್ಞಾನ ಪಡೆದು ಕೊಂಡವನು ಕೃಷ್ಣ ಆದ. ಪ್ರಜಾ ಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಮುಖ್ಯ ಉದ್ದೇಶ ಏನೆಂದರೆ ನಾವೆಲ್ಲರೂ ಪರಮಾತ್ಮನ ಜ್ಞಾನ ವನ್ನು ಕೇಳಿ ಮನುಷ್ಯರಿಂದ ದೇವರುಗಳು ಆಗಬೇಕು ಎಂದರು. ಕೃಷ್ಣನ ರಾಜ್ಯದಲ್ಲಿ ನಾವು ಬರಬೇಕು ಎಂಬುವ ಉದ್ದೇಶದಿಂದ ಕೃಷ್ಣಾ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಜಾ ಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಬಿ.ಕೆ. ಜ್ಯೋತಿ ಮತ್ತು ಬಿ.ಕೆ.ಗೀತ ಅಕ್ಕನವರು ಮೊದಲಾದವರು ಭಾಗವಹಿಸಿದ್ದರು.


































