
ಕೆಜಿಎಫ್.ಆ.೨೯-ಸರ್ಕಾರದಿಂದ ಬಹಳಷ್ಟು ಶ್ರಮಪಟ್ಟು ಅನುದಾನವನ್ನು ತರುತ್ತೇನೆ.ಆದರೆ ರಸ್ತೆಗಳನ್ನು ನಿತ್ಯ ಸಂಚರಿಸುವವರು ಹಾಗೂ ಸ್ಥಳೀಯ ಜನತೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಹಾಜರಿದ್ದು ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆಯೆ ಎಂಬುದನ್ನು ಖುದ್ಧು ಪರಿಶೀಲನೆ ನಡೆಸಬೇಕು ಎಂದು ಶಾಸಕಿ ರೂಪಶಶಿಧರ್ ನಾಗರೀಕರಿಗೆ ಕಿವಿ ಮಾತು ಹೇಳಿದರು.
ಸಿಎಂಡಿಎ ಅನುದಾನದಲ್ಲಿ ಬಿಡುಗಡೆಗೊಂಡಿರುವ ೧೦ ಕೋಟಿ ಅನುದಾನದಲ್ಲಿ ನಗರದ ಉರಿಗಾಂಪೇಟೆ ಮಂಜುನಾಥ್ ನಗರ ,ಸ್ವರ್ಣನಗರ ವಾರ್ಡ್ ೧೩ ಹಾಗೂ ವಾರ್ಡ್ ೧೨ ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿಯನ್ನು ಪ್ರಥಮ ಹಂತದಲ್ಲಿ ಕೈಗೊಳ್ಳಲಾಗಿದ್ದು ೨ನೇ ಹಂತದಲ್ಲಿ ವಾರ್ಡ್‌ಗಳಲ್ಲಿನ ರಸ್ತೆ ಅಭಿವೃದ್ಧಿಗೆ ಅದ್ಯತೆ ನೀಡಲಾಗಿದ್ದು,ನಾನು ಓಮ್ಮೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸುವುದು ಆದರೆ ಇಲ್ಲಿನ ನಾಗರೀಕರು ಪ್ರತಿ ದಿನ ಸಂಚಾರ ಮಾಡುತ್ತಿರಿ ಆದ್ದರಿಂದ ನಿಮಗೂ ರಸ್ತೆಯ ಗುಣಮಟ್ಟವನ್ನು ನೋಡಿಕೊಳ್ಳುವ ಜಾವದ್ಬರಿ ಇರುತ್ತದೆ ಮುಂದಿನ ೧೦ ,೧೫ ವರ್ಷಗಳ ಕಾಲ ಗುತ್ತಿಗೆ ಪಡೆದ ಗುತ್ತಿಗೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂಬುದು ನಿಭಂದನೆಗಳಲ್ಲಿ ಇದ್ದು ಸಾರ್ವಜನಿಕರು ಸಹ ಇತ್ತ ಗಮನಹರಿಸಿದರೆ ಗುಣಮಟ್ಟದ ಕಾಮಗಾರಿಯನ್ನು ಕಾಣಬಹುದು ಎಂದು ಹೇಳಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೋಟ್ಯಾಂತರ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ನಾನು ಸರ್ಕಾರಿ ಕಚೇರಿಗಳು ಸಚಿವರ ಮನೆ ಮೆಟ್ಟಿಲುಗಳನ್ನು ಹತ್ತಿ ಶ್ರಮಪಟ್ಟಿದ್ದೇನೆ.ಅನುದಾನವನ್ನು ಬಿಡುಗಡೆಗೊಳಿಸಬೇಕಾದರೆ ಕಂಡು ಬರುವ ಕಷ್ಟಗಳ ಬಗ್ಗೆ ನನಗೆ ಮಾತ್ರ ಗೊತ್ತು ಎಂದು ಹೇಳಿದರು.
ಅಧಿಕಾರಿಗಳು ರಸ್ತೆ ಗುಣಮಟ್ಟದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.ರಸ್ತೆಗಳು ಜನರಿಗೆ ಅನುಕೂಲವಾಗುವಂತೆ ಇರಬೇಕು ಹೊರತು ಕಳಪೆ ಗುಣಮಟ್ಟದಿಂದ ಕೂಡಿರಬಾರದು ಎಂದು ಹೇಳಿದರು.
ಇದೇ ವೇಳೆ ಮುಖಂಡರಾದ ಮಣಿ ಮಾತನಾಡಿ,ಕ್ಷೇತ್ರದ ಪ್ರಮುಖ ರಸ್ತೆಗಳು ಸರಿಯಿಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕಮೆಂಟ್ಸ್ ಮಾಡುತ್ತಾರೆ.ಆದರೆ ರಸ್ತೆ ಕಾಮಗಾರಿ ನಡೆಸಿದ ನಂತರ ಅದರ ಬಗ್ಗೆ ಮಾತನಾಡುವುದೇ ಮತ್ತೆ ಅಲ್ಲಿ ರಸ್ತೆ ಆಗಿದೆ.ಇಲ್ಲಿ ರಸ್ತೆಯಾಗಿಲ್ಲ ಎಂದು ಕಮೆಂಟ್ಸ್ ಮಾಡುತ್ತಾರೆ.ಆದರೆ ಬಿಜಿಎಂಎಲ್ ಭಾಗದಲ್ಲಿ ೨೦ ೩೦ ವರ್ಷಗಳಿಂದ ಮಾಡದ ರಸ್ತೆ ಕಾಮಗಾರಿಗಳನ್ನು ಈ ಬಾರಿ ಪೂರ್ಣಗೋಳಿಸಿರುವುದು ಸಾಧನೆ ಅಲ್ಲವೇ ಎಂದರು.


































