Home ಜಿಲ್ಲೆ ಬೆಂಗಳೂರು ಕುಮಾರಕೃಪ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಗಂಗಾ ಗೃಹ ಪ್ರವೇಶ

ಕುಮಾರಕೃಪ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಗಂಗಾ ಗೃಹ ಪ್ರವೇಶ

ಬೆಂಗಳೂರು, ನ. ೧೬- ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹ ಇನ್ನು ಮುಂದೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಲಿದ್ದು, ಇದಕ್ಕೆ ಗಂಗಾ ಎಂದು ಹೆಸರಿಡಲಾಗಿದೆ. ನೂತನ ಅಧಿಕೃತ ನಿವಾಸಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮನಾರ್ ಪೂಜೆ ನೆರವೇರಿಸಿ, ಗೃಹ ಪ್ರವೇಶ ಮಾಡಿದರು.


ಕುಮಾರಕೃಪ ಅತಿಥಿ ಗೃಹದ ಮುಖ್ಯ ಕಟ್ಟಡ ಮುತ್ತು ಅನೆಕ್ಸ್ ಕಟ್ಟಡ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡ ಪಾರಂಪರಿಕೆಗೆ ಧಕ್ಕೆಯಾಗದಂತೆ ಈ ಕಟ್ಟಡವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಇಂದು ಶುಭವಾದ ಕಾರಣ ಪೂಜೆ ನೆರವೇರಿಸಿದ್ದೇನೆ. ಗುರುವಾರ ಎಲ್ಲ ೨೨೪ ಶಾಸಕರು ಹಾಗೂ ಸಂಸದರನ್ನು ಆಹ್ವಾನಿಸಿ ಇಲ್ಲಿಂದಲೇ ಅವರ ಭೇಟಿ, ಸಭೆಗಳು ನಡೆಯಲಿವೆ ಎಂದು ಹೇಳಿದರು.


ಮುಖ್ಯಮಂತ್ರಿ ಹುದ್ದೆ ಯಾರಿಗೂ ಶಾಶ್ವತವಲ್ಲ. ಆದರೆ, ಮುಖ್ಯಮಂತ್ರಿಗಳಿಗೂ ಒಂದು ಅಧಿಕೃತ ನಿವಾಸವಿರಲಿ ಎಂಬ ಕಾರಣಕ್ಕೆ ಕುಮಾರಕೃಪ ಅತಿಥಿ ಗೃಹವನ್ನು ಶೇ. ೧೦ ರಷ್ಟು ಮಾತ್ರ ಬದಲಿಸಿ ಮುಖ್ಯಮಂತ್ರಿಗಳ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡದ ಪರಿವರ್ನತೆಗೆ ಹೆಚ್ಚಿನ ಹಣ ಬಳಸಿಲ್ಲ. ಪಿಠೋಪಕರಣಗಳಿಗೂ ಹೆಚ್ಚಿನ ಹಣ ವೆಚ್ಚ ಮಾಡಿಲ್ಲ. ನನ್ನ ಹಳೆಯ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಇಲ್ಲಿಗೆ ತಂದು ಹಾಕಿದ್ದೇನೆ ಹಾಗೆಯೇ ಕುಮಾರಕೃಪದಲ್ಲಿದ್ದ ಹಳೆಯ ಪಿಠೋಪಕರಣಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.


ಕಟ್ಟಡದ ಮೂಲ ಸ್ವರೂಪರಕ್ಕೆ ಧಕ್ಕೆಯಾಗದಂತೆ ನವೀಕರಣ ಕಾರ್ಯ ನಡೆದಿದೆ. ಹಣವನ್ನು ಹೆಚ್ಚು ವ್ಯಯ ಮಾಡಿಲ್ಲ. ನೆಲ ಹಾಸಿಗೆ, ಕಲ್ಲುಗಳ ಬಳಕೆಗೂ ದುಬಾರಿ ಕಲ್ಲುಗಳನ್ನು ಬಳಸದೆ ಕಡಿಮೆ ಬೆಲೆಯ ಕಲ್ಲು ಮತ್ತು ಗ್ರಾನೈಟ್ ಬಳಸಲಾಗಿದೆ. ನಿಖರವಾಗಿ ಎಷ್ಟು ಖರ್ಚಾಗಿದೆ ಎಂಬುದು ಬಗ್ಗೆ ಇನ್ನೂ ಬಿಲ್ ಬಂದಿಲ್ಲ. ಆದರೆ ಹೆಚ್ಚಿನ ಹಣ ವ್ಯಯ ಮಾಡಿಲ್ಲ ಎಂದು ಹೇಳಿದರು.


ಇನ್ನು ಮುಂದೆ ಶಾಸಕರು, ಅಧಿಕಾರಿಗಳ ಜತೆ ಇಲ್ಲಿಯೇ ಭೇಟಿ, ಸಭೆಗಳು ನಡೆಯಲಿವೆ. ನನ್ನ ಕುಟುಂಬ ಸಹ ಇನ್ನೂ ೮-೧೦ ದಿನಗಳಲ್ಲಿ ಈ ಕಟ್ಟಡಕ್ಕೆ ಬರಲಿದ್ದಾರೆ. ಎಲ್ಲರನ್ನೂ ಇಲ್ಲಿಯೇ ಭೇಟಿ ಮಾಡುತ್ತೇನೆ ಎಂದು ಹೇಳಿದರು.


ಶುಭ ದಿನವಾದ ಕಾರಣ ಇಂದು ಗೃಹ ಪ್ರವೇಶ ನೆರವೇರಿಸಿದ್ದೇನೆ. ಪೂರ್ಣ ಕಾಮಗಾರಿ ಮುಗಿಯಲು ಇನ್ನು ಕೆಲವು ದಿನಗಳು ಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.


ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುತ್ತಿದ್ದೇನೆ. ನೀವು ಅಂದುಕೊಂಡುತೆ ಯಾವ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇಲ್ಲ. ಇಂದು ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದೇನೆ. ಇಂದಿನಿಂದಲೇ ನೂತನ ಅಧಿಕೃತ ನಿವಾಸದಲ್ಲಿ ವಾಸ್ತವ್ಯ ಹೂಡುತ್ತೇನೆ. ರಾತ್ರಿ ಇಲ್ಲಿಯೇ ನಿದ್ರಿಸುತ್ತೇನೆ ಎಂದು ಹೇಳಿದರು.


ಮುಖ್ಯಮತ್ರಿಗಳ ನೂತನ ಕಟ್ಟಡಕ್ಕೆ ಗಂಗಾ ಎಂದು ಹೆಸರಿಟ್ಟಿದ್ದೇನೆ. ಹಾಗಾಯೇ ಕೆಲವು ಕೊಠಡಿಗಳಿಗೆ ರಾಜ್ಯದ ವಿವಿಧ ನದಿಗಳ ಹೆಸರುಗಳನ್ನು ನಾಮಕರಣ ಮಾಡಲಾಗಿದೆ ಎಂದು ಅವರು ತಿಳಿಸಿದರು.